ಉಪ್ಪಿನಂಗಡಿ: ಬಿಜೆಪಿಯಿಂದ ಬಟ್ಟೆ ಚೀಲದ ಅಭಿಯಾನ

ಉಪ್ಪಿನಂಗಡಿ: ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ತಡೆಗಟ್ಟಲು ಬಿಜೆಪಿಯ ವತಿಯಿಂದ ವಾರದ ಸಂತೆಯ ದಿನವಾದ 34 ನೆಕ್ಕಿಲಾಡಿಯ ಸಂತೆ ಮೈದಾನದಲ್ಲಿ ಬಟ್ಟೆ ಚೀಲಗಳನ್ನು ಹಂಚುವ ಅಭಿಯಾನ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯೆ ಶಯನಾ ಜಯಾನಂದ್, ಪ್ಲಾಸ್ಟಿಕ್ ಮನುಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಚಿಂತಿಸಿದ್ದು, ಆದ್ದರಿಂದ ಪ್ರತಿಯೋರ್ವರೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಭ ತಾ.ಪಂ. ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಬಿಜೆಪಿಯ ಸಂತೋಷ್ ಕುಮಾರ್ ಪಂರ್ದಾಜೆ, ಚಂದ್ರಶೇಖರ ಮಡಿವಾಳ, ರಾಮಚಂದ್ರ ಮಣಿಯಾಣಿ, ಗುರುರಾಜ್ ಭಟ್, ಜಯಾನಂದ, ಉಷಾ ಮುಳಿಯ, ಜಯಂತ ಪೊರೋಳಿ, ಸುಜಾತ ರೈ, ಪ್ರಶಾಂತ್, ಸದಾನಂದ, ಸುಂದರ ದೇವಾಡಿಗ ಮತ್ತಿತರರು ಇದ್ದರು.
ಬಿಜೆಪಿ ಉಪ್ಪಿನಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಅತ್ರಮಜಲು ಸ್ವಾಗತಿಸಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ವಂದಿಸಿದರು.





