ಹಾಕಿ: ಬೆಲ್ಜಿಯಂ ವಿರುದ್ಧ್ದ ಭಾರತಕ್ಕೆ ಜಯ
ಆಂಟ್‌ವರ್ಪ್,ಸೆ. 26: ಮನ್‌ದೀಪ್ ಸಿಂಗ್ ಹಾಗೂ ಆಕಾಶ್‌ದೀಪ್ ಸಿಂಗ್ ಗಳಿಸಿದ ತಲಾ ಒಂದು ಗೋಲು ನೆರವಿನಿಂದ ಭಾರತೀಯ ಪುರುಷರ ಹಾಕಿ ತಂಡ ಬೆಲ್ಜಿಯಂ ವಿರುದ್ಧದ ಮೊದಲ ಪಂದ್ಯದಲ್ಲಿ 2-0 ಅಂತರದಿಂದ ಜಯ ದಾಖಲಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಜಯ ಸಾಧಿಸಿರುವ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮನ್‌ದೀಪ್ ಹಾಗೂ ಆಕಾಶ್‌ದೀಪ್ ಸಿಂಗ್ ಕ್ರಮವಾಗಿ 39ನೇ ಹಾಗೂ 54ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು. ಸಿಂಗ್ 39ನೇ ನಿಮಿಷದಲ್ಲಿ ಭಾರತದ ಗೋಲು ಖಾತೆ ತೆರೆದರು. ಬೆಲ್ಜಿಯಂ ಕೊನೆಯ ಕ್ವಾರ್ಟರ್‌ನಲ್ಲಿ ಗೋಲು ಗಳಿಸಲು ಯತ್ನಿಸಿ ಗೋಲ್‌ಕೀಪರ್ ಶ್ರೀಜೇಶ್‌ಗೆ ಸವಾಲೊಡ್ಡಿತು. ಬೆಲ್ಜಿಯಂ ಗೋಲು ಗಳಿಕೆಗೆ ತಡೆಯಾಗಿ ನಿಂತ ಶ್ರೀಜೇಶ್ ಭಾರತದ ಮುನ್ನಡೆಯನ್ನು ಕಾಪಾಡಿದರು.
ಎರಡನೇ ಪಂದ್ಯ ಸೆ.28 ರಂದು ನಡೆಯಲಿದೆ.
Next Story





