ರೈತನಿಂದ ಲಂಚ ಸ್ವೀಕಾರ ಆರೋಪ: ಗ್ರಾಪಂ ಪಿಡಿಓ ಎಸಿಬಿ ಬಲೆಗೆ

ದಾವಣಗೆರೆ, ಸೆ.26: ನಿವೇಶನ ವ್ಯಾಜ್ಯ ಬಗೆಹರಿಸಲು ದಾವಣಗೆರೆ ತಾಲೂಕಿನ ಮಳಲ್ಕೆರೆ ಗ್ರಾಮದ ರೈತ ಮಹೇಶ ಎಂಬಾತನಿಂದ ಇಲ್ಲಿನ ಬಸ್ ನಿಲ್ದಾಣದ ಬಳಿ 5 ಸಾವಿರ ಹಣ ಪಡೆಯುವಾಗ ಗ್ರಾಪಂ ಪಂಚಾಯತ್ ಅಭಿವೃದ್ದಿ ಅಧಿಕಾರಿ ನಿಂಗಾಚಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪಿಡಿಓ ರನ್ನು ವಶಕ್ಕೆ ಪಡೆದು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
Next Story





