ಐಸಿಸಿಯೊಂದಿಗೆ ಫೇಸ್‌ಬುಕ್ ಒಪ್ಪಂದ

ದುಬೈ, ಸೆ.26: ಐಸಿಸಿಯೊಂದಿಗೆ ಅಧಿಕೃತ ಡಿಜಿಟಲ್ ಕಂಟೆಂಟ್ ಪಾಲುದಾರನಾಗಿ ಫೇಸ್‌ಬುಕ್ ಸಾಮಾಜಿಕ ಜಾಲತಾಣ ಸಂಸ್ಥೆಯು ಒಪ್ಪಂದ ಮಾಡಿಕೊಂಡಿದೆ. ಗುರುವಾರ ಈ ವಿಚಾರವನ್ನು ತಿಳಿಸಿದ ಐಸಿಸಿ ಕಾರ್ಯನಿರ್ವಾಹಕ ಮನು ಸವಾನಿ, ‘‘ಈ ರೀತಿಯ ಬಹು ವರ್ಷ ಹಾಗೂ ಬಹು ಮಾರುಕಟ್ಟೆ ಒಪ್ಪಂದ ಇದೇ ಮೊದಲ ಬಾರಿ ಮಾಡಿಕೊಳ್ಳಲಾಗಿದೆ. ವಿಶ್ವದ ಬಹುದೊಡ್ಡ ಸಾಮಾಜಿಕ ಜಾಲತಾಣ ಮೂಲಕ ಕ್ರಿಕೆಟ್ ಪ್ರಚುರಪಡಿಸಲು ವೇದಿಕೆ ಲಭಿಸಿದೆ ’’ಎಂದರು. ಐಸಿಸಿಯೊಂದಿಗೆ ಕೈಜೋಡಿಸಿದ್ದು ಸಂತಸ ತಂದಿದೆ. ಕ್ರಿಕೆಟ್‌ನ ರೋಚಕ ಕ್ಷಣಗಳನ್ನು ಫೇಸ್‌ಬುಕ್‌ನಲ್ಲಿ ವಾಚ್ ಹಾಗೂ ಚಾರ್ಟ್ ಮೂಲಕ ಜನರ ಬಳಿ ಕೊಂಡೊಯ್ಯಲು ಸಂತೋಷವಾಗುತ್ತಿದೆ ಎಂದು ಫೇಸ್‌ಬುಕ್ ಇಂಡಿಯಾ ಉಪಾಧ್ಯಕ್ಷ ಅಜಿತ್ ಮೋಹನ್ ಹೇಳಿದ್ದಾರೆ.
Next Story





