ವಿದ್ಯುತ್ ತಂತಿ ತಗಲಿ ಬಾಲಕ ಮೃತ್ಯು

ದಾವಣಗೆರೆ, ಸೆ.27: ವಿದ್ಯುತ್ ತಂತಿ ತಗಲಿ ಎಂಟು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಭಾಷಾ ನಗರದ 5 ನೇ ಕ್ರಾಸ್‍ನಲ್ಲಿ ಶುಕ್ರವಾರ ನಡೆದಿದೆ.
ಶಾಹಿದ್ ಸಾವನ್ನಪ್ಪಿದ ಬಾಲಕ. ಮನೆ ಮುಂದೆ ಆಟ ಆಡುವ ವೇಳೆ ಪಕ್ಕದ ಟಿಸಿ ಬಾಕ್ಸ್ ಗೆ ಕೈ ಸ್ಪರ್ಶಿಸಿದ್ದು, ಪರಿಣಾಮ ಬಾಲಕ ಮೃತಪಟ್ಟಿದ್ದಾನೆ. ಬೆಸ್ಕಾಂ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಸ್ಕಾಂ ಬೇಜವಾಬ್ದಾರಿತನಕ್ಕೆ ತಮ್ಮ ಪುತ್ರ ಬಲಿಯಾಗಿದ್ದಾನೆ ಎಂದು ದೂರಿದರು.
ಈ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.
Next Story





