ಮಂಗಳೂರು: 'ಭಾರತ ಹಿಂದೂ ರಾಷ್ಟ್ರ' ಎಂದ ಯುವಕನ ವಿರುದ್ಧ ದೂರು ದಾಖಲು

ಬಂಟ್ವಾಳ, ಸೆ. 27: 'ಭಾರತ ಹಿಂದೂ ರಾಷ್ಟ್ರ' ಎಂದ ಯುವಕನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿದೆ.
ಬಿಮೂಡ ಗ್ರಾಮದ ಗೂಡಿನಬಳಿಯ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ಈ ದೂರು ನೀಡಿದ್ದು, ಸೆ. 25ರಂದು ಮಂಜುನಾಥ್ ಬಂಟ್ವಾಳ ಎಂಬಾತ ಮಂಗಳೂರಿನ ಮಾಲ್‍ವೊಂದರಲ್ಲಿ ದೇಶ ವಿರೋಧಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು, ಈತನ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ರೀತಿಯ ದೇಶ ದ್ರೋಹದ ಹೇಳಿಕೆಯಿಂದ ದೇಶದ ಮೂಲ ನಿವಾಸಿಗಳಾದ ಮುಸ್ಲಿಂ ಸಮುದಾಯಕ್ಕೆ ನೋವುಂಟಾಗಿದಲ್ಲದೆ, ಇದರಿಂದ ಮುಸ್ಲಿಮರ ಬದುಕುವ ಸ್ವಾತಂತ್ರ್ಯವನ್ನು ಪ್ರಶ್ನಿಸಿದಂತಾಗಿದ್ದು, ಇಂತಹ ಹೇಳಿಕೆ ನೀಡಿರುವ ಈತನ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸುವಂತೆ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





