ಕಾರಿಗೆ ಢಿಕ್ಕಿ ಹೊಡೆದ ಬಿಎಸ್‌ಎಫ್ ವಾಹನಕ್ಕೆ ಗ್ರಾಮಸ್ಥರಿಂದ ಬೆಂಕಿ

ಬಾರಾಮುಲ್ಲಾ(ಜಮ್ಮು-ಕಾಶ್ಮೀರ),ಸೆ.27: ಬಾರಾಮುಲ್ಲಾ-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಎಸ್‌ಎಫ್ ವಾಹನವೊಂದು ಕಾರಿಗೆ ಢಿಕ್ಕಿ ಹೊಡೆದ ಬಳಿಕ ಕುಪಿತ ಗ್ರಾಮಸ್ಥರು ಅದಕ್ಕೆ ಬೆಂಕಿ ಹಚ್ಚಿದ್ದಾರೆ. ವಾಹನದ ಚಾಲಕ ಗಾಯಗೊಂಡಿದ್ದು,ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆ ಎರಡು ಬಿಎಸ್‌ಎಫ್ ವಾಹನಗಳು ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಕಾರಿನ ಚಾಲಕ ಬಿಎಸ್‌ಎಫ್ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದ. ಈ ವೇಳೆ ಅಲ್ಲಿ ಸೇರಿದ್ದ ಸ್ಥಳೀಯರು ಬಿಎಸ್‌ಎಫ್ ಚಾಲಕ ವೇಗವಾಗಿ ಮತ್ತು ಅಜಾಗ್ರತೆಯಿಂದ ಚಲಾಯಿಸುತ್ತಿದ್ದ ಎಂದು ಆರೋಪಿಸಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಬಿಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು.
ಇನ್ನೊಂದು ವಾಹನದಲ್ಲಿದ್ದ ಇತರ ಅಧಿಕಾರಿಗಳು ಚಾಲಕನನ್ನು ರಕ್ಷಿಸಿದ್ದು,ಘಟನೆಯ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





