ಉಡುಪಿ ಜಿಲ್ಲಾಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಬದ್ಧ: ಸಚಿವ ಶ್ರೀರಾಮುಲು
ಉಡುಪಿ, ಸೆ.27: ಉಡುಪಿ ಸರಕಾರಿ ಆಸ್ಪತ್ರೆಯನ್ನು 250 ಬೆಡ್‌ಗಳ ಆಸ್ಪತ್ರೆ ಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ದಲ್ಲಿ ಚರ್ಚಿಸಿ ಆರ್ಥಿಕ ಇಲಾಖೆಯ ಮಂಜೂರಾತಿ ಪಡೆದುಕೊಳ್ಳಲು ಬದ್ಧನಾಗಿದ್ದೇನೆ ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಹೂಡುವ ನಿಟ್ಟಿನಲ್ಲಿ ಶುಕ್ರವಾರ ಉಡುಪಿಗೆ ಆಗಮಿಸಿದ ವೇಳೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡು ತ್ತಿದ್ದರು. ಅಪರೂಪದ ಕಾಯಿಲೆ ಪೀಡಿತರನ್ನು ಆರೋಗ್ಯ ಕರ್ನಾಟಕಕ್ಕೆ ಸೇರಿ ಸಲು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಪೊಲೀಸರನ್ನು ಸೇರಿಸಲು ಸೂಚಿಸ ಲಾಗಿದೆ. ಆರೋಗ್ಯ ಭಾಗ್ಯದ ವಿಶೇಷ ಯೋಜನೆಯಲ್ಲಿ ಸರಕಾರಿ ನೌಕರರು, ವಕೀಲರು ಹಾಗೂ ಪತ್ರಕರ್ತರನ್ನು ಕೂಡ ಸೇರಿಸಲಾಗುವುದು ಎಂದರು.
ಈ ಹಿಂದೆ ಲೋಕ ಸೇವಾ ಆಯೋಗದ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದ ಎಂಬಿಬಿಎಸ್ ವೈದ್ಯರನ್ನು ರಾಜ್ಯದ ಆಯಾ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಮೂಲಕ ನೇರವಾಗಿ ನೇಮಕ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. ಹೀಗೆ ರಾಜ್ಯದಲ್ಲಿರುವ 1800 ಎಂಬಿಬಿಎಸ್ ವೈದ್ಯರ ಕೊರತೆ ನೀಗಿಸಲಾಗುವುದು ಎಂದರು.
ಗುಡ್ಡೆಗಾಡು ಪ್ರದೇಶದ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಇತರ ಪ್ರದೇಶಗಳ ವೈದ್ಯರಿಗಿಂತ ಹೆಚ್ಚಿನ ಸಂಬಳ ನೀಡಲಾಗುವುದು. ಅದೇ ರೀತಿ ತಜ್ಞರ ವೈದ್ಯರನ್ನು ಆ್ಯಕ್ಷನ್ ಪ್ಲಾನ್ ಮೂಲಕ ಭರ್ತಿ ಮಾಡಿಕೊಳ್ಳಲು ಕ್ರಮ ತೆಗೆದುಕೊ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಸುಕುಮಾರ್ ಶೆಟ್ಟಿ, ಜಿಪಂ ಅಧ್ಯಕ್ಷ ದಿನಕರ ಬಾಬು ವೊದಲಾದ ವರು ಉಪಸ್ಥಿತರಿದ್ದರು.







