ಪಾದುವ ಕಾಲೇಜಿನಲ್ಲಿ 'ಆರೋಗ್ಯವಂತ ಸ್ಪರ್ಧೆಗಾಗಿ ಆರೋಗ್ಯವಂತ ಯುವಜನತೆ' ಕಾರ್ಯಕ್ರಮ

ಮಂಗಳೂರು: ರಾಷ್ಟ್ರೀಯ ಸೇವಾ ಯೋಜನೆ ಸಂಘಟನೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಪಾದುವ ಕಾಲೇಜಿನ ಘಟಕದ ವತಿಯಿಂದ ನಾನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. 'ಆರೋಗ್ಯವಂತ ಸ್ಪರ್ಧೆಗಾಗಿ ಆರೋಗ್ಯವಂತ ಯುವಜನತೆ' ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನೂ ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರೊ. ಇಗ್ನೇಷಿಯಸ್ ನೊರೊನ್ಹಾ, ಪಾದುವ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಯೋಜನಾಧಿಕಾರಿಯಾದ ಶ್ರೀ. ಯತಿರಾಜ್, ಪಾದುವ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊ, ಪಾದುವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಯೋಜನಾಧಿಕಾರಿಯಾದ ಶ್ರೀ. ರೋಶನ್ ಸಾಂತುಮಾಯರ್, ಹಾಗೂ ಸಹಾಯಕ ಯೋಜನಾಧಿಕಾರಿಯಾದ ಶ್ರೀ.ರಾಹುಲ್ ಹಾಗೂ ಕು. ಮಿಶಲ್ ಇವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸ್ವಚ್ಛ ಹಾಗೂ ಹಸಿರು ಭಾರತ ಎಂಬ ವಿಶೇಷ ಸ್ಪರ್ಧೆಯನ್ನು ಕಾಲೇಜಿನ ವಿಧ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು ಹಾಗೆಯೇ ಪ್ರೊ. ನರೇಂದ್ರ ನಾಯಕ್ ಇವರು ಉಪನ್ಯಾಸವನ್ನು ನೀಡಿದರು. ಶ್ರೀ. ರೋಶನ್ ಸಾಂತುಮಾಯರ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರ್ವಹಿಸಿದರು.










