ಮಂಗಳೂರು: ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಎಸ್ಡಿಪಿಐ ಧರಣಿ

ಮಂಗಳೂರು, ಸೆ.27: ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ಶ್ರಮಿಕ ವರ್ಗ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದು ಈ ಕೂಡಲೇ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಪಿಎಫ್ಐ ಜಿಲ್ಲಾದ್ಯಕ್ಷ ಹನೀಫ್ ಕಾಟಿಪ್ಪಳ್ಳ ಆಗ್ರಹಿಸಿದರು.
ಅವರು ಎಸ್ಡಿಪಿಐ ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಶುಕ್ರವಾರ ಸುರತ್ಕಲ್ ನಲ್ಲಿ ನಡೆದ ಕೇಂದ್ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿದೇಯಕದ ವಿರುದ್ಧ ಹಾಗೂ ರಾಷ್ಟ್ರೀಯ ಹೆದ್ದಾರಿ ದುರಾವಸ್ಥೆಯನ್ನು ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವೈಫಲ್ಯತೆಗಳನ್ನು ವಿರೋಧಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಕುಲಾಯಿ, ಎಸ್ಡಿಎಸಿಯು (ಆಟೋ ಯೂನಿಯನ್) ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮಾತನಾಡಿದರು.
ಪ್ರಭಟನಾ ಧರಣಿಯ ನೇತೃತ್ವವನ್ನು ಎಸ್ಡಿಪಿಐ ಉತ್ತರ ವಿಧಾನಸಬಾ ಕ್ಷೇತ್ರಾಧ್ಯಕ್ಷ ಆಯಾಝ್ ಕೃಷ್ಣಾಪುರ ವಹಿಸಿದ್ದರು, ಎಸ್ಡಿಟಿಯು ಜಿಲ್ಲಾ ಸಮಿತಿ ಸದಸ್ಯ ಇರ್ಫಾನ್ ಕಾನ, ಎಸ್ಡಿಪಿಐ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







