ಮ್ಯಾಕ್ ಗ್ರೂಪ್‌ನಿಂದ ಸಕಲ ಸೌಲಭ್ಯಗಳ ವಸತಿ ಸಮುಚ್ಚಯ 'ಮ್ಯಾಕ್ ದಿ ಅಡ್ರೆಸ್'

ಮಂಗಳೂರು : ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ಅತ್ಯುತ್ತಮ ಗುಣಮಟ್ಟದ ಪ್ಲೈವುಡ್‌ಗಳ ತಯಾರಿಕೆಗೆ ಹೆಸರುವಾಸಿಯಾಗಿರುವ ಮ್ಯಾಕ್ ಗ್ರೂಪ್ ಕಳೆದ 36 ವರ್ಷಗಳಲ್ಲಿ ಮಂಗಳೂರು, ಬೆಂಗಳೂರು ಮತ್ತು ಕೇರಳದಲ್ಲಿ ತನ್ನ ಗುಣಮಟ್ಟದ ಯೋಜನೆಗಳ ಹಿರಿಮೆಯನ್ನು ಕಾಯ್ದುಕೊಂಡು ಬಂದಿದೆ.
ಮ್ಯಾಕ್ ಗ್ರೂಪ್ ಇತ್ತೀಚೆಗೆ ಮಂಗಳೂರಿನ ಫಳ್ನೀರ್‌ನ ಸ್ಟರ್ರೊಕ್ ರಸ್ತೆಯ ಬಳಿ ಎದ್ದುನಿಂತಿರುವ ಐಷಾರಾಮಿ ವಸತಿ ಸಮುಚ್ಚಯಗಳನ್ನು ಹೊಂದಿರುವ 'ಮ್ಯಾಕ್ ದಿ ಅಡ್ರೆಸ್'ನ ಕಾಮಗಾರಿ ಸಂಪೂರ್ಣಗೊಳಿಸಿದೆ.
ಮ್ಯಾಕ್ ದಿ ಅಡ್ರೆಸ್ ಉತ್ತಮ ಕಾರಣಗಳಿಗಾಗಿ ಸದಾ ಸುದ್ದಿಯಲ್ಲಿದ್ದು ಮಂಗಳೂರಿನ ಅತ್ಯುತ್ತಮ ವಸತಿ ಕಟ್ಟಡಗಳಲ್ಲಿ ಒಂದಾಗಿರುವ ಕಾರಣಕ್ಕೆ ಜನರಿಂದಲೂ ಶ್ಲಾಘನೆಗೊಳಗಾಗಿದೆ. ರೈಲ್ವೇ ನಿಲ್ದಾಣ, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು, ಧಾರ್ಮಿಕ ಕೇಂದ್ರಗಳು ಮತ್ತು ಶಾಪಿಂಗ್ ಕೇಂದ್ರಗಳೂ ಮ್ಯಾಕ್ ದಿ ಅಡ್ರೆಸ್‌ನಿಂದ ಕೂಗಳತೆಯಲ್ಲಿವೆ. ಮ್ಯಾಕ್ ದಿ ಅಡ್ರೆಸ್, ಉದ್ಯಾನವನ, ತೆರೆದ ರಂಗಮಂದಿರ ಹೊಂದಿದೆ. ಈ ಯೋಜನೆ ವಿಶೇಷ ವಿನ್ಯಾಸವನ್ನು ಹೊಂದಿದೆ.
ದೀಪಗಳುಳ್ಳ ಜಾಗಿಂಗ್ ಟ್ರಾಕ್‌ಗಳು ಮತ್ತು ಉದ್ಯಾನವನಗಳು, ಹವಾನಿಯಂತ್ರಣ ಹೊಂದಿರುವ ಎರಡು ಪ್ರವೇಶ ಲಾಬಿಗಳು, ಜಿಮ್, ವಿಶಾಲವಾದ ಯೋಗ ಕೋಣೆ, ಸುವಾನ, ಜಕುಝಿ, ಸ್ಟೀಮ್ ರೂಂ ಜೊತೆಗೆ ಬಟ್ಟೆ ಬದಲಾವಣೆ, ಸ್ನಾನ ಮತ್ತು ಶೌಚದ ಕೋಣೆಗಳನ್ನು ಹೊಂದಿ ರುವ ಸ್ಪಾ, ಚಾಲಕರು/ಕೆಲಸದಾಳುಗಳಿಗಾಗಿ ಪ್ರತ್ಯೇಕ ಕೋಣೆಗಳು ಮತ್ತು ತಳಮಹಡಿಯಲ್ಲಿ ಶೌಚಾಲಯ ವ್ಯವಸ್ಥೆ ಹಾಗೂ ಇನ್ನಿತರ ಅನೇಕ ಸೌಲಭ್ಯಗಳನ್ನು 'ಮ್ಯಾಕ್ ದಿ ಅಡ್ರೆಸ್' ಹೊಂದಿದೆ.

















