ತನ್ನ ಪತ್ನಿ ಜೊತೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಲ್ಲಿ ತಮ್ಮನನ್ನೇ ಕೊಲೆಗೈದ ಅಣ್ಣ

ಕೊಲೆಯಾದ ಮಹೇಂದ್ರ
ಪಾಂಡವಪುರ, ಸೆ.27: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರಬಹುದೆಂದು ಶಂಕಿಸಿ ಸ್ವಂತ ತಮ್ಮನನ್ನೇ ಕೊಲೆಗೈದಿರುವ ಘಟನೆ ತಾಲೂಕಿನ ಚಿನಕುರಳಿ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಮಹೇಂದ್ರ(26) ಕೊಲೆಯಾದ ವ್ಯಕ್ತಿ. ಈತನ ಅಣ್ಣ ಮಂಜುನಾಥ್ ಕೊಲೆಗೈದವ. ಇಬ್ಬರ ನಡುವೆ ಗುರುವಾರ ತಡರಾತ್ರಿ ನಡುವೆ ಜಗಳ ನಡೆದಿದೆ. ನಂತರ, ಮಹೇಂದ್ರ ಮಲಗಿದ್ದಾಗ ಮಂಜುನಾಥ್ ಹಾರೆಯಿಂದ ಎದೆಗೆ ತಿವಿದು ಕೊಲೆಗೈದಿದ್ದಾನೆ.
ಈ ಸಂಬಂಧ ಮೃತನ ಸಹೋದರಿ ದೂರು ನೀಡಿದ್ದು, ಪಾಂಡವಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





