ಪಾಕಿಸ್ತಾನ-ಶ್ರೀಲಂಕಾ ಮೊದಲ ಏಕದಿನ ಮಳೆಗಾಹುತಿ

ಕರಾಚಿ, ಸೆ.27: ಪಾಕಿಸ್ತಾನ ಹಾಗೂ ಶ್ರೀಲಂಕಾದ ನಡುವೆ ಶುಕ್ರವಾರ ಇಲ್ಲಿ ನಡೆಯಬೇಕಾಗಿದ್ದ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಕರಾಚಿಯ ಕ್ರಿಕೆಟ್ ಪ್ರೇಮಿಗಳು 10 ವರ್ಷಗಳಿಂದ ಕಾಯುತ್ತಿದ್ದ ಏಕದಿನ ಪಂದ್ಯ ಮುಂದೂಡಲ್ಪಟ್ಟಿದೆ.
ದಕ್ಷಿಣ ಬಂದರು ನಗರದಲ್ಲಿ ಶುಕ್ರವಾರ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಕ್ರಿಕೆಟ್ ಮೈದಾನ ನೀರಿನಿಂದ ಆವೃತ್ತವಾಗಿತ್ತು. ಪಂದ್ಯ ಆರಂಭವಾಗುವ ಯಾವುದೇ ಲಕ್ಷಣ ಕಾಣದಿದ್ದಾಗ ಅಂಪೈರ್‌ಗಳು ಸಂಜೆ 4:30ಕ್ಕೆ ಪಂದ್ಯವನ್ನು ರದ್ದುಪಡಿಸಿದರು. 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ರವಿವಾರ ನಡೆಯಲಿದೆ. ಕರಾಚಿ ಏಕದಿನ ಕ್ರಿಕೆಟ್ ಪಂದ್ಯದ ಆತಿಥ್ಯ ವಹಿಸಿ 10 ವರ್ಷಗಳು ಕಳೆದಿವೆ. 2009ರಲ್ಲಿ ಇಲ್ಲಿ ಶ್ರೀಲಂಕಾ ತಂಡ ಕೊನೆಯ ಬಾರಿ ಏಕದಿನ ಪಂದ್ಯ ಆಡಿತ್ತು. 2009ರಲ್ಲಿ ಶ್ರೀಲಂಕಾದ ಟೀಮ್ ಬಸ್ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಯಾವುದೇ ವಿದೇಶಿ ತಂಡಗಳು ಎರಡು ವಾರಗಳ ಕಾಲ ಪಾಕ್ ಪ್ರವಾಸವನ್ನು ಕೈಗೊಂಡಿಲ್ಲ. ಕರಾಚಿ ನಗರ ಎಲ್ಲ 3 ಏಕದಿನ ಪಂದ್ಯಗಳ ಆತಿಥ್ಯವಹಿಸಿಕೊಂಡಿದೆ. ಲಾಹೋರ್‌ನಲ್ಲಿ 3 ಪಂದ್ಯಗಳ ಟ್ವೆಂಟಿ-20 ಸರಣಿ ನಡೆಯಲಿದೆ.





