ಪಿಕೆಎಲ್: ಮುಂಬಾಗೆ ತಿವಿದ ಬುಲ್ಸ್

ಜೈಪುರ, ಸೆ.27: ಮತ್ತೊಮ್ಮೆ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಪವನ್ ಕುಮಾರ್ ಶೆರಾವತ್ ನೆರವಿನಿಂದ ಬೆಂಗಳೂರು ಬುಲ್ಸ್ ತಂಡ ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ 109ನೇ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 35-33 ಅಂಕಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ.
ಹಾಲಿ ಚಾಂಪಿಯನ್ ಬುಲ್ಸ್ ಪರ ಪವನ್ 11 ಅಂಕ ಗಳಿಸಿದರು. 19ನೇ ಪಂದ್ಯದಲ್ಲಿ 10ನೇ ಗೆಲುವು ಸಾಧಿಸಿ 58 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದ ಬುಲ್ಸ್ ಪ್ಲೇ-ಆಫ್ ತಲುಪುವ ಅವಕಾಶವನ್ನು ಜೀವಂತವಗಿರಿಸಿಕೊಂಡಿದೆ. ಮುಂಬಾ ತಂಡ ಹಲವು ಬಾರಿ ಪಂದ್ಯದಲ್ಲಿ ಮರು ಹೋರಾಟ ನೀಡಿದರೂ ಅಂತಿಮವಾಗಿ 2 ಅಂಕಗಳ ಅಂತರದಿಂದ ಸೋಲುಂಡಿತು. ಮುಂಬಾ ಪರ ಅಭಿಷೇಕ ಸಿಂಗ್ 10 ಅಂಕ ಗಳಿಸಿದರು.
ಟೈಟಾನ್ಸ್‌ಗೆ ಜಯ: ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ಜೈಪುರ ತಂಡವನ್ನು 51-31 ಅಂತರದಿಂದ ಮಣಿಸಿತು. ಟೈಟಾನ್ಸ್ ಪರ ಸಿದ್ದಾರ್ಥ್ ದೇಸಾಯಿ 22 ಅಂಕ ಗಳಿಸಿ ಮಿಂಚಿದರು. ಜೈಪುರ ಪರ ದೀಪಕ್ ಹೂಡಾ 12 ಅಂಕ ಗಳಿಸಿದರು.
Next Story





