ಬೆಂಗಳೂರು: ಕ್ಷತ್ರೀಯ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಧರಣಿ

ಬೆಂಗಳೂರು: ಕ್ಷತ್ರೀಯ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ವತಿಯಿಂದ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯಾಧ್ಯಕ್ಷ ಉದಯ್ ಕುಮಾರ್ ಸಿಂಗ್ ಮಾತನಾಡಿ, ರಾಜ್ಯದಲ್ಲಿ ಒಂದೂವರೆ ಕೋಟಿಗೂ ಅಧಿಕ ಮಂದಿ ಕ್ಷತ್ರಿಯರು ಇದ್ದು ಇದುವರೆಗೂ ಸರಿಯಾದ ರೀತಿ ಸೌಲಭ್ಯ ದೊರೆತಿಲ್ಲ, ಈಗಿರುವ ಬಿಜೆಪಿ ಸರ್ಕಾರದಲ್ಲಿ ಕನಿಷ್ಠ ಆರು ಮಂದಿಗಾದರೂ ಕ್ಷತ್ರಿಯ ಸಮಾಜದವರಿಗೆ ಸಚಿವ ಸ್ಥಾನ ನೀಡಬೇಕು, ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು, ಕ್ಷತ್ರಿಯ ಮರಾಠ ಸಮಾಜವನ್ನು ಪ್ರವರ್ಗ 3ಬಿ ಯಿಂದ 2ಎಗೆ ಸೇರ್ಪಡೆಗೊಳಿಸಬೇಕು, ಕ್ಷತ್ರಿಯ ಅಭಿವೃದ್ಧಿ ನಿಗಮವನ್ನು ಸ್ಥಾಪಿಸ ಬೇಕು, ಶಿವಾಜಿ ಮಹಾರಾಜರ ಹಾಗೂ ನಾಲ್ವಡಿ ಕೃಷ್ಣ ರಾಜ ಒಡೆಯರ ಪ್ರತಿಮೆಯನ್ನು ವಿಧಾನ ಸಭಾ ಆವರಣದಲ್ಲಿ ಸ್ಥಾಪಿಸ ಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಕೃಷ್ಣ ದಲಭಜನ್ ಮತ್ತಿತರರು ಹಾಜರಿದ್ದರು.
Next Story





