ಮಹಿಳಾ ಪೊಲೀಸ್ ಜತೆ ಅನುಚಿತ ವರ್ತನೆ ಆರೋಪ: ಬಿಜೆಪಿ ಶಾಸಕನ ಬಂಧನ

ಮುಂಬೈ: ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ತುಮ್ಸರ್ ಕ್ಷೇತ್ರದ ಬಿಜೆಪಿ ಶಾಸಕ ಚರಣ್ ವಾಘ್ಮರೆ ಅವರನ್ನು ಶನಿವಾರ ಬಂಧಿಸಲಾಗಿದೆ. ಘಟನೆ ಸೆಪ್ಟೆಂಬರ್ 16ರಂದು ನಡೆದಿತ್ತು ಹಾಗೂ ಈ ಕುರಿತು ಪ್ರಕರಣ ಸೆಪ್ಟೆಂಬರ್ 18ರಂದು ದಾಖಲಾಗಿತ್ತು.
ಆರೋಪಿ ಶಾಸಕ 2012ರಲ್ಲಿ ಭಂಡಾರ ಜಿಲ್ಲಾ ಪರಿಷದ್ ಇದರ ವಿತ್ತ ಮತ್ತು ಕಾಮಗಾರಿ ಸಮಿತಿಯ ಅಧ್ಯಕ್ಷನಾಗಿದ್ದರೆ 2014ರಲ್ಲಿ ಭಂಡಾರ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದರು.
Next Story





