Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಕರ್ನಾಟಕ, ಛತ್ತೀಸ್‌ಗಡ, ತಮಿಳುನಾಡಿಗೆ ಜಯ

ಕರ್ನಾಟಕ, ಛತ್ತೀಸ್‌ಗಡ, ತಮಿಳುನಾಡಿಗೆ ಜಯ

► ಹಾಲಿ ಚಾಂಪಿಯನ್ ಮುಂಬೈಗೆ ಆಘಾತ ► ರಾಹುಲ್ ಶತಕ

ವಾರ್ತಾಭಾರತಿವಾರ್ತಾಭಾರತಿ28 Sept 2019 10:59 PM IST
share
ಕರ್ನಾಟಕ, ಛತ್ತೀಸ್‌ಗಡ, ತಮಿಳುನಾಡಿಗೆ ಜಯ

► ವಿಜಯ್ ಹಝಾರೆ ಟ್ರೋಫಿ

ಬೆಂಗಳೂರು, ಸೆ.28: ವಿಜಯ್ ಹಝಾರೆ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮುಂಬೈಗೆ ಇಂದು ಛತ್ತೀಸ್‌ಗಢ ಆಘಾತ ನೀಡಿದೆ. ಲೋಕೇಶ್ ರಾಹುಲ್ ಶತಕದ ನೆರವಿನಲ್ಲಿ ಕೇರಳ ವಿರುದ್ಧ ಕರ್ನಾಟಕ 60 ರನ್‌ಗಳ ಜಯ ಗಳಿಸಿದೆ.

  ಆಲೂರು ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಛತ್ತೀಸ್‌ಗಢ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 317 ರನ್ ಗಳಿಸಿತ್ತು. 318 ರನ್‌ಗಳ ಕಠಿಣ ಸವಾಲನ್ನು ಪಡೆದ ಛತ್ತೀಸ್‌ಗಢ ತಂಡ ಮಧ್ಯಮ ಸರದಿಯ ದಾಂಡಿಗ ಅಮನ್‌ದೀಪ ಖರೆ ಔಟಾಗದೆ 117 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಛತ್ತೀಸ್‌ಗಢ ತಂಡ ಇನ್ನೂ 1 ಎಸೆತ ಬಾಕಿ ಉಳಿಸಿ ಗೆಲುವಿನ ನಗೆ ಬೀರಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ತಂಡದ ಆದಿತ್ಯ ತಾರೆ 107 ಎಸೆತಗಳಲ್ಲಿ 90 ರನ್ ದಾಖಲಿಸಿ ತಂಡದ ಮೊತ್ತವನ್ನು ಉಬ್ಬಿಸಿದರು. ಜಯ ಬಿಸ್ತಾ (34) ಬೇಗನೆ ನಿರ್ಗಮಿಸಿದ ಬಳಿಕ ತಾರೆ ಮತ್ತು ಯಶಸ್ವಿ ಜೈಸ್ವಾಲ್ (44) ಇನಿಂಗ್ಸ್ ಕಟ್ಟಿದರು. ನಾಯಕ ಶ್ರೇಯಸ್ ಅಯ್ಯರ್ 50 ಎಸೆತಗಳಲ್ಲಿ 46 ರನ್ ಸಿಡಿಸಿದರು.

ಅಯ್ಯರ್ ನಿರ್ಗಮನದ ಹೊತ್ತಿಗೆ ಮುಂಬೈ 45 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 238 ರನ್ ಗಳಿಸಿತ್ತು. ಸೂರ್ಯ ಕುಮಾರ್ ಯಾದವ್ 31 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಇರುವ 81 ರನ್ ದಾಖಲಿಸಿದರು. ಸೂರ್ಯಕುಮಾರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಲ್ಲಿ ಮುಂಬೈ ತಂಡದ ಸ್ಕೋರ್ 300ರ ಗಡಿ ದಾಟಿತ್ತು.

  ಛತ್ತೀಸ್‌ಗಢ ತಂಡದ ಇನಿಂಗ್ಸ್ ಉತ್ತಮವಾಗಿರಲಿಲ್ಲ.ಆರಂಭಿಕ ದಾಂಡಿಗ ಶಶಾಂಕ್ ಚಂದ್ರಶೇಖರ್ (5) ಬೇಗನೆ ಪೆವಿಲಿಯನ್ ಸೇರಿದರು. ಜೀವನ್‌ಜ್ಯೋತ್ ಸಿಂಗ್ (44), ಮತ್ತು ಅಶುತೋಷ್ ಸಿಂಗ್(35) ಮುಂಬೈ ತಂಡವನ್ನು ಆಧರಿಸಲು ಯತ್ನಿಸಿದರು. ಜೀವನ್‌ಜ್ಯೋತ್ ಅವರನ್ನು ಶಮ್ಸ್ ಮುಲಾನಿ ಪೆವಿಲಿಯನ್‌ಗೆ ಅಟ್ಟಿದರು. 82ಕ್ಕೆ 2 ವಿಕೆಟ್ ಕಳೆದುಕೊಂಡ ಛತ್ತೀಸ್‌ಗಢ ತಂಡ ಈ ಮೊತ್ತಕ್ಕೆ 13 ರನ್ ಸೇರಿಸುವಷ್ಟರಲ್ಲಿ ಇನ್ನೊಂದು ಆಘಾತ ಅನುಭವಿಸಿತು. ಬಳಿಕ ಅಮನ್‌ದೀಪ್ ಖರೆ 94 ಎಸೆತಗಳಲ್ಲಿ 8 ಬವಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 117 ರನ್ ಗಳಿಸಿ ತಂಡದ ಗೆಲುವಿಗೆ ಸಹಾಯ ಮಾಡಿದರು. ಮೊದಲು ಅಮನ್‌ದೀಪ್ ಅವರು ಶಶಾಂಕ್ ಸಿಂಗ್(40) ನೆರವು ಪಡೆದರು. ಬಳಿಕ ಅಜಯ್ ಮಂಡಲ್ (ಔಟಾಗದೆ 39) ಮತ್ತು ಅಮನ್‌ದೀಪ್ ಮುರಿಯದ ಜೊತೆಯಾಟದಲ್ಲಿ 96 ರನ್ ಜಮೆ ಮಾಡಿದರು.

ಮುಂಬೈ ತಂಡದ ಪರ ಶಮ್ಸ್ ಮುಲಾನಿ (33ಕ್ಕೆ 3), ಧವಲ್ ಕುಲಕರ್ಣಿ 66ಕ್ಕೆ 1 ವಿಕೆಟ್ ಪಡೆದರು.

► ಕೇರಳಕ್ಕೆ ಸೋಲುಣಿಸಿದ ಕರ್ನಾಟಕ: ಇಲ್ಲಿನ ಎಂ,ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಕೇರಳ ವಿರುದ್ಧ ಕರ್ನಾಟಕ ತಂಡ 60 ರನ್‌ಜಯ ಗಳಿಸಿದೆ. ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಅವಕಾಶ ಕಳೆದುಕೊಂಡಿರುವ ಲೋಕೇಶ್ ರಾಹುಲ್ ಅವರು 122 ಎಸೆತಗಳಲ್ಲಿ 10 ಬೌಂಡರಿ ಮತ್ತು ಸಿಕ್ಸರ್ ನೆರವಿನಲ್ಲಿ 131 ಜಮೆ ಮಾಡಿದರು. ನಾಯಕ ಮನೀಷ್ ಪಾಂಡೆ 51 ಎಸೆತಗಳಲ್ಲಿ 50 ರನ್ ಗಳಿಸಿದರು. ಕೇರಳದ ಬೌಲರ್‌ಗಳು ಕರ್ನಾಟಕವನ್ನು 294ಕ್ಕೆ ನಿಯಂತ್ರಿಸಿದರು. ಕೇರಳದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ಆರಂಭಿಕ ಬ್ಯಾಟ್ಸ್ ಮನ್ ವಿಷ್ಣು ವಿನೋದ್ ಶತಕ (104) ದಾಖಲಿಸಿದರೂ ತಂಡ ಗೆಲುವಿನ ದಡ ಸೇರಲಿಲ್ಲ.

ಆಲೂರ್ ಕ್ರಿಕೆಟ್ ಸ್ಟೇಡಿಯಂ -2ರಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಹೈದರಾಬಾದ್ 121 ರನ್‌ಗಳ ಭರ್ಜರಿ ಜಯ ಗಳಿಸಿದೆ. ಬಿಹಾರದ ವಿರುದ್ಧ ತಮಿಳುನಾಡು ತಂಡ ಜಯ ಸಾಧಿಸಿದೆ. ಬಿಹಾರ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 217 ರನ್ ಗಳಿಸಿತ್ತು. ವಿಜಯ್ ಶಂಕರ ಔಟಾಗದೆ 91 ಮತ್ತು ಬಿ. ಅಪರಾಜಿತ್ 52 ರನ್ ನೆರವಿನಲ್ಲಿ ತಮಿಳುನಾಡು 46.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 218 ರನ ಗಳಿಸಿತು.

ಗುಜರಾತ್ ವಿರುದ್ಧ ಮಧ್ಯಪ್ರದೇಶ , ಸರ್ವಿಸಸ್ ವಿರುದ್ಧ ಪಶ್ಚಿಮ ಬಂಗಾಳ ಗೆಲುವು ದಾಖಲಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X