ಸೆಮಿಫೈನಲ್‌ನಲ್ಲಿ ಕಶ್ಯಪ್‌ಗೆ ಸೋಲು
ಕೊರಿಯ ಓಪನ್

ಇಂಚಿಯಾನ್ , ಸೆ.28: ಭಾರತದ ಬ್ಯಾಡ್ಮಿಂಟನ್ ಆಟಗಾರ ಪಾರುಪಳ್ಳಿ ಕಶ್ಯಪ್ ಪ್ರತಿಷ್ಠಿತ ಕೊರಿಯ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಸೆಮಿಫೈನಲ್‌ನಲ್ಲಿ ಸೋತು ಹೊರ ನಡೆದಿದ್ದಾರೆ.
ಇದರೊಂದಿಗೆ ಪಿ. ಕಶ್ಯಪ್ ಅವರ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದ್ದು, ಭಾರತದ ಅಸವಲು ಅಂತ್ಯಗೊಂಡಿದೆ.
ಶನಿವಾರ ನಡೆದ ಪುರುಷ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಕಶ್ಯಪ್ ಅವರು ವಿಶ್ವದ ನಂ.1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ಅವರ ವಿರುದ್ಧ 13-21, 15-21 ಅಂತರದಲ್ಲಿ ಸೋತು ನಿರ್ಗಮಿಸಿದರು. ಪಂದ್ಯದ ಆರಂಭದಿಂದಲೇ ಕಶ್ಯಪ್ ಮೇಲೆ ಮೊಮೊಟಾ ಮೇಲುಗೈ ಸಾಧಿಸಿದರು. ದ್ವಿತೀಯ ಸೆಟ್‌ನಲ್ಲಿ ಒಂದು ಹಂತದಲ್ಲಿ 8-12 ಅಂಕಗಳ ಹಿನ್ನಡೆ ಅನುಭವಿಸಿದ್ದ ಕಶ್ಯಪ್ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದರು. ಇದರ ಪರಿಣಾಮ 12-12ರ ಸಮಬಲ ಸಾಧಿಸಿದರು. ಬಳಿಕ ಕಶ್ಯಪ್ ಅವರ ಹಿಡಿತ ಸಡಿಲಗೊಂಡಿತು. ಆದರೆ ಕೊನೆಯ ಹಂತದಲ್ಲಿ ಮತ್ತೆ ಮೊಮೊಟಾ ಸತತ ಆರು ಅಂಕಗಳನ್ನು ಬಾಚಿಕೊಂಡು ಮುನ್ನಡೆಯನ್ನು 18-12 ಅಂಕಗಳಿಗೆ ಏರಿಸಿದರು. ಬಳಿತ ಕಶ್ಯಪ್‌ಗೆ ಚೇತರಿಸಕೊಳ್ಳಲು ಮೊಮೊಟಾ ಅವಕಶ ನೀಡಲೇ ಇಲ್ಲ. ಅಂತಿಮವಾಗಿ ಕಶ್ಯಪ್ ಅವರು ಮೊಮೊಟಾ ವಿರುದ್ಧ ಶರಣಾದರು. 40 ನಿಮಿಷಗಳ ಹೋರಾಟ ಕೊನೆಗೊಂಡಿತು.
ಹೈದರಾಬಾದ್‌ನ 33ರ ಹರೆಯದ ಅನುಭವಿ ಬ್ಯಾಡ್ಮಿಂಟನ್ ಆಟಗಾರ 33ರ ಹರೆಯದ ಕಶ್ಯಪ್ ಅವರು 2014ರ ಕಾಮನ್‌ವೆಲ್ತ್ ಗೆಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. 2019ರಲ್ಲಿ ಕೆನಡಾ ಓಪನ್ ಬಿಡಬ್ಲ್ಯುಎಫ್ ಸೂಪರ್ 100 ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದರು. ಆದರೆ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ನಿಯಲ್ಲಿ ಸೋಲು ಅನುಭವಿಸಿದ್ದರು.





