ಜಿಸಿಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶಾ

ಅಹ್ಮದಾಬಾದ್, ಸೆ.28: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ (ಜಿಸಿಎ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಮಿತ್ ಶಾ ಅವರ ನಿರ್ಗಮನದಿಂದ ಖಾಲಿಯಾದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಲಾಗಿಲ್ಲ. 2014ರಲ್ಲಿ ಅಮಿತ್ ಶಾ ಅವರು ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ನರೆಂದ್ರ ಮೋದಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ದಿಲ್ಲಿಗೆ ತರೆಳಿದ ಬಳಿಕ ಅಮಿತ್ ಶಾ ಅವರು ಜಿಸಿಎ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಇದೇ ವೇಳೆ ಜಿಸಿಎ ಉಪಾಧ್ಯಕ್ಷ ಪರಿಮಾಲ್ ನಾಥ್‌ವಾಣಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ಪುತ್ರ ಧನರಾಜ್ ಖಾಲಿಯಾದ ಉಪಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಶಾ ಅವರ ಮಗ ಜೈ ಅವರು ಜಿಸಿಎ ಜೊತೆ ಕಾರ್ಯದರ್ಶಿಯಾಗಿದ್ದಾರೆ. ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.
Next Story





