ಸ್ಪೇನ್ ಗೆ ಸೋಲುಣಿಸಿದ ಭಾರತ
ಪುರುಷರ ಹಾಕಿ
ಅಂಟ್ವಾರ್ಪ್, ಸೆ.28: ಹರ್ಮನ್ ಪ್ರೀತ್ ಸಿಂಗ್ ದಾಖಲಿಸಿದ ಅವಳಿ ಗೋಲುಗಳ ಸಹಾಯದಿಂದ ಭಾರತ ಇಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸ್ಪೇನ್ ವಿರುದ್ಧ 6-1 ಅಂತರದಲ್ಲಿ ಜಯ ಗಳಿಸಿದೆ. ಭಾರತದ ಹರ್ಮನ್‌ಪ್ರೀತ್ ಸಿಂಗ್(28 ನಿಮಿಷ, 32ನೇ ನಿ.), ಮನ್‌ಪ್ರೀತ್ ಸಿಂಗ್(24ನೇ ನಿ.), ನೀಲಕಂಠ ಶರ್ಮಾ (39ನೇ ನಿ.),ಮನ್‌ದೀಪ್ ಸಿಂಗ್(56ನೇ ನಿ.), ರೂಪೇಂದ್ರಪಾಲ್ ಸಿಂಗ್(59ನೇ ನಿ.) ಗೋಲು ಜಮೆ ಮಾಡಿದರು. ಸ್ಪೇನ್ ತಂಡದ ಪಾವು ಕ್ಯುಮೆದಾ(29ನೇ ನಿ.) ಗೋಲು ಗಳಿಸಿದರು.
Next Story





