ಇನೋಳಿಯಲ್ಲಿ ಯುವತಿಯ ಮೃತದೇಹ ಪತ್ತೆ

ಮಂಗಳೂರು: ಕೊಣಾಜೆ ಠಾಣೆ ವ್ಯಾಪ್ತಿಯ ಇನೋಳಿ ಕೊರಿಯ ಎಂಬಲ್ಲಿಯ ನೇತ್ರಾವತಿ ನದಿಯಲ್ಲಿ ಯುವತಿಯೊಬ್ಬರ ಮೃತದೇಹ ರವಿವಾರ ಮಧ್ಯಾಹ್ನ ಪತ್ತೆಯಾಗಿದೆ.
ಶನಿವಾರ ಮಧ್ಯರಾತ್ರಿ ಬಿ.ಸಿ.ರೋಡ್ ನೇತ್ರಾವತಿ ನದಿಗೆ ತಾಯಿ ಮತ್ತು ಇಬ್ಬರು ಮಕ್ಕಳು ಹಾರಿ ಆತ್ಮಹತ್ಯೆಗೈದಿದ್ದರು. ಇದರಲ್ಲಿ ತಾಯಿ ಕವಿತಾ ಮಂದಣ್ಣ ಅವರನ್ನು ಬದುಕಿಸಲು ಯತ್ನಿಸಿದರೂ ಫಲಕಾರಿಯಾಗಿರಲಿಲ್ಲ. ಆದರೆ ಇಬ್ಬರು ಮಕ್ಕಳಾದ ಕಲ್ಪಿತಾ ಮಂದಣ್ಣ ಹಾಗೂ ಕೌಶಿಕ್ ಮಂದಣ್ಣ ಪತ್ತೆಯಾಗಿರಲಿಲ್ಲ. ಇದೀಗ ಇನೋಳಿಯಲ್ಲಿ ದೊರೆತ ಯುವತಿಯ ಮೃತದೇಹವು ಕಲ್ಪಿತಾ ಮಂದಣ್ಣ ಅವರದ್ದೇ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ದೇರಳಕಟ್ಟೆಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
Next Story





