ಹಳೆಕೋಟೆ: ರಕ್ತದಾನ ಶಿಬಿರ

ಮಂಗಳೂರು: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಳೆಕೋಟೆ ಬ್ರಾಂಚ್ ಹಾಗೂ ಇಕ್ರಾ ಚಾರಿಟೇಬಲ್ ಟ್ರಸ್ಟ್ ಹಳೆಕೋಟೆ ಉಳ್ಳಾಲ ಇದರ ಜಂಟಿ ಸಂಯೋಜನೆಯೊಂದಿಗೆ ಯೆನೆಪೋಯ ಬ್ಲಡ್ ಬ್ಯಾಂಕ್ ದೇರಳಕಟ್ಟೆ ಸಹಕಾರದೊಂದಿಗೆ ರಕ್ತದಾನ ಶಿಬಿರವು ಸಯ್ಯದ್ ಮದನಿ ಶಾಲೆ ಹಳೆಕೋಟೆಯಲ್ಲಿ ರವಿವಾರ ನಡೆಯಿತು.
ಉಳ್ಳಾಲ ನಗರಸಭಾ ಕೌನ್ಸಿಲರ್ ಅಸ್ಗರ್ ಅಲಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಹಳೆಕೋಟೆ ವಾರ್ಡ್ ಅಧ್ಯಕ್ಷ ಅಬ್ದುಲ್ ರವೂಫ್, ಇಕ್ರಾ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಫಾರೂಕ್, ಟೆಸ್ಟ್ ಸ್ಪೋರ್ಟ್ಸ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಗೌರವಾಧ್ಯಕ್ಷ ಶಬೀರ್ ಹಸನ್, ಕೆ.ಎಂ.ಕೆ ಮಂಜನಾಡಿ, ಅಲ್ತಾಫ್ ಯು.ಎಚ್, ಎಸ್.ಡಿ.ಪಿ.ಐ. ಉಳ್ಳಾಲ ನಗರಸಭಾ ಅಧ್ಯಕ್ಷ ಅಬ್ಬಾಸ್ ಎ.ಆರ್, ಸಮಾಜ ಸೇವಕರಾದ ಹಮೀದ್ ಪಜೀರ್, ಅಸ್ಫಾಕ್ ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಇದರ ಸಂಚಾಲಕ ಸಫ್ವಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಲ್ಯಾಸ್ ಹಾಜಬ್ಬ, ಒನ್ ಮೊಬೈಲ್ ಇದರ ಮಾಲಕ ರಫೀಕ್, ಪಯಾಝ್ ಕೈಕೊ ಮೊದಲಾದವರು ಹಾಜರಿದ್ದರು. ಫೈರೋಝ್ ಕಾರ್ಯಕ್ರಮ ನಿರೂಪಿಸಿದರು.






