ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ ವಜ್ರಾಭರಣಗಳ ಪ್ರದರ್ಶನ ‘ವಿಶ್ವವಜ್ರ’ ಉದ್ಘಾಟನೆ

ಉಡುಪಿ, ಸೆ. 28: ಉಡುಪಿಯ ವಿಎಸ್‌ಟಿ ರಸ್ತೆಯ ಗೀತಾಂಜಲಿ ಸಿಲ್ಕ್ಸ್ ಸಮೀಪದ ವೆಸ್ಟ್‌ಕೋಸ್ಟ್ ಬಿಲ್ಡಿಂಗ್‌ನಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನ ಉಡುಪಿ ಶೋರೂಂನಲ್ಲಿ 15 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಭಾರತದ ಅತೀ ದೊಡ್ಡ ವಜ್ರಾಭರಣಗಳ ಪ್ರದರ್ಶನ ‘ವಿಶ್ವವಜ್ರ’ವನ್ನು ರವಿವಾರ ಜಿ.ಶಂಕರ್ ಕುಟುಂಬ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಉಡುಪಿಗೆ ಎಷ್ಟೆ ಜ್ಯುವೆಲ್ಲರಿ ಮಳಿಗೆಗಳು ಬಂದರೂ ಕೂಡ ಅವುಗಳಿಗೆ ವಿಭಿನ್ನ ರೀತಿಯ ಗ್ರಾಹಕರು ಉಡುಪಿ ಯಲ್ಲಿ ಇದ್ದಾರೆ. ಸುಲ್ತಾನ್ ಗೋಲ್ಡ್ ಗ್ರಾಹಕರಿಗೆ ಅನುಕೂಲವಾಗುವ ರೀತಿಯ ದರ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡರೆ ಹೆಚ್ಚಿನ ಗ್ರಾಹಕರು ಬರಲು ಸಾಧ್ಯ. ಆದುದರಿಂದ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಫೆಮಿನಾ ಮಿಸ್ ಇಂಡಿಯಾ ಗೋವಾ ಶಾಸ್ತ್ರಾ ಶೆಟ್ಟಿ ಮಿಡ್ಲ್ ಈಸ್ಟ್ ಕಲೆಕ್ಷನ್ ಅನಾವರಣಗೊಳಿಸಿದರು.
ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್, ಕಿದಿ ಯೂರು ಹೊಟೇಲಿನ ಮಾಲಕ ಜಿತೇಶ್ ಕಿದಿಯೂರು, ಹೀರಾ ಡಿ.ಶೆಟ್ಟಿ, ಉದ್ಯಮಿ ಮಂಜುನಾಥ ಉಪಾಧ್ಯಾಯ, ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಎಸ್.ಶೆಟ್ಟಿ, ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್, ಎ.ಆರ್.ಬ್ಯಾರಿ ದುಬೈ, ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ, ಎಲ್‌ಐಸಿ ಸಿಡಿಟಿ ಶ್ರೀರಾಮ ರಾವ್, ನೈನಾ ಫ್ಯಾನ್ಸಿ ವ್ಯವಸ್ಥಾಪನಾ ನಿರ್ದೇಶಕ ಮುಹಮ್ಮದ್ ಮೌಲಾ, ವೈದ್ಯೆ ಡಾ.ಛಾಯಾಲತಾ, ಫರ್ನಿಚರ್ ಮಾಲ್‌ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಸಲೀಂ, ಉಡುಪಿ ಡೆವಲಪರ್ಸ್ ಆಡಳಿತ ಪಾಲು ದಾರ ಜಮಾಲುದ್ದೀನ್, ಪವರ್ ಸಂಸ್ಥೆಯ ಅಧ್ಯಕ್ಷೆ ಶ್ರುತಿ ಜಿ.ಶೆಣೈ, ಥೀಮ್ಸ್ ಡಿಸೈನರ್ ಬೂಟಿಕ್ ಆಡಳಿತ ನಿರ್ದೇಶಕಿ ರೇಶ್ಮಾ ಸೈಯದ್, ತುಳುಕೂಟದ ತಾರಾ ಆಚಾರ್ಯ ಮತ್ತು ವಿದ್ಯಾಶಾಸ್ತ್ರಿ ವಿವಿಧ ಡೈಮಂಡ್ ಸಂಗ್ರಹಗಳನ್ನು ಅನಾವರಣಗೊಳಿಸಿದರು.
ಜಿಪಂ ಸದಸ್ಯ ಗೀತಾಂಜಲಿ ಸುವರ್ಣ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಹಿರಿಯ ವೈದ್ಯ ಡಾ. ರವೀಂದ್ರನಾಥ್ ಶೆಟ್ಟಿ, ಉದ್ಯಮಿ ಅಬ್ದುಲ್ ರೆಹಮಾನ್ ಮುಖ್ಯ ಅತಿಥಿಗಳಾಗಿದ್ದರು.
ಸುಲ್ತಾನ್ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ.ಟಿ.ಎಂ.ಅಬ್ದುರ್ರವೂಫ್, ಕಾರ್ಯಕಾರಿ ನಿರ್ದೇಶಕ ಟಿ.ಎಂ.ಅಬ್ದುರ್ರಹೀಂ, ಪ್ರಧಾನ ವ್ಯವಸ್ಥಾಪಕ ಎ.ಕೆ.ಉನ್ನಿತನ್, ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಶಾಖಾ ವ್ಯವಸ್ಥಾಪಕ ಅಜ್ಮಲ್, ಸೇಲ್ಸ್ ಮೇನೆಜರ್ ಇಕ್ಬಾಲ್, ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್, ಮಾರುಕಟ್ಟೆ ವ್ಯವಸ್ಥಾಪಕ ಶಿಯಾಬುದ್ದೀನ್ ಉಪಸ್ಥಿತರಿದ್ದರು.
ಆಸೀಫ್ ಇಕ್ಬಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸೆ.29ರಿಂದ ಅ.13ರವರೆಗೆ ನಡೆಯುವ ಈ ಬೃಹತ್ ವಜ್ರಾಭರಣಗಳ ಪ್ರದರ್ಶನದಲ್ಲಿ ಜಗತ್ತಿನಾದ್ಯಂತದ ಐಜಿಐ ಪ್ರಮಾಣೀಕೃತ ವಜ್ರಾಭರಣಗಳ 10,000 ಕ್ಯಾರಟ್‌ಗೂ ಅಧಿಕ ಸಂಗ್ರಹ ಇದೆ. ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಅಮೆರಿಕ, ಸಿಂಗಾಪುರ ಮತ್ತು ಮಧ್ಯಪ್ರಾಚ್ಯದ ವಿಶೇಷ ಅಂತಾರ್ ರಾಷ್ಟ್ರೀಯ ಸಂಗ್ರಹಗಳು ಮತ್ತು ವಿಶೇಷ ಏಕರತ್ನ ಸಂಗ್ರಹಗಳು ಈ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿವೆ.
5,000ರೂ.ನಿಂದ ಒಂದು ಕೋಟಿ ರೂ.ವರೆಗಿನ ಒಂಟಿ ಹವಳ ಸಂಗ್ರಹ ಗಳು, ಸೆಲೆಬ್ರಿಟಿ ಸಂಗ್ರಹ, ವೈವಾಹಿಕ ಆಭರಣ, ಪಾರ್ಟಿ ಮತ್ತು ಲೈಟ್‌ವೇಯ್ಟಿ ಆಭರಣಗಳ ಸಂಗ್ರಹಗಳು ಈ ಪ್ರದರ್ಶನದಲ್ಲಿವೆ. ವಜ್ರಖಚಿತ ಉದ್ದ ನೆಕ್ಲೇಸ್, ಬಳೆಗಳು, ಮೂಗುಬೊಟ್ಟು, ಸ್ಟಡ್‌ಗಳು, ತನ್ಮನಿಯ ಸಂಗ್ರಹಗಳು, ವಿಶೇಷ ಲೈಟ್‌ವೇಯ್ಟಿ ಕಾಲೇಜ್/ಆಫೀಸ್‌ಗೆ ಧರಿಸುವ ವಜ್ರದ ನೆಕ್ಲೇಸ್‌ಗಳ ಸಂಗ್ರಹ 56,000ರೂ.ನಿಂದ ಆರಂಭವಾಗಲಿದೆ. ಪ್ರದರ್ಶನದ ಸಮಯದಲ್ಲಿ ವಿಶೇಷ 8,000ರೂ. ದರ ಕಡಿತ ಆಫರ್ ನೀಡಲಾಗಿದೆ.











