ಸೆ.30: ಸಂಘ ನಿಕೇತನದಲ್ಲಿ ಅಂತಾರಾಷ್ಟ್ರೀಯ ವಿಶಿಷ್ಟ ಮಕ್ಕಳ ಸಂಗಮ
ಮಂಗಳೂರು, ಸೆ.29: ನಗರದ ಸಂಘ ನಿಕೇತನದಲ್ಲಿ ಮಾತು ಬಾರದ ಮತ್ತು ಕಿವಿ ಕೇಳದ ವಿಶಿಷ್ಟ ಮಕ್ಕಳ ಅಂತಾರಾಷ್ಟ್ರೀಯ ಮಟ್ಟದ ಮೂರು ದಿನಗಳ ವಿಶಿಷ್ಟ ಮಕ್ಕಳ ಸಂಗಮ ಕಾರ್ಯಕ್ರಮ ಸೆ.30ರಂದು ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಅನಂ ಪ್ರೇಮ್ ಸಮಾಜ ಸೇವಾ ಸಂಸ್ಥೆ, ಮುಂಬೈಯ ಹೆಲನ್ ಕೆಲ್ಲರ ಇನ್‌ಸ್ಟಿಟ್ಯೂಟ್ ಫಾರ್ ಡೀಫ್ ಆ್ಯಂಡ್ ಡೀಫ್ ಬ್ಲೈಂಡ್ ಸಂಸ್ಥೆಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಾಸಕ ವೇದವ್ಯಾಸ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆನಂತರ ಶಿಬಿರಾರ್ಥಿಗಳಿಗೆ ವಿವಿಧ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ.
2ನೇ ದಿನ ಶಿಬಿರಾರ್ಥಿಗಳನ್ನು ನಗರದ ವಿವಿಧ ಸ್ಥಳಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ದೋಣಿ ವಿಹಾರದ ಮೂಲಕ ಸ್ಥಳ ಪರಿಚಯವನ್ನೂ ಮಾಡಿಸಲಾಗುತ್ತದೆ. ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಯೋಜಕರಾದ ಸಂಜಯ್ ಪ್ರಭು ಮತ್ತು ಶ್ರೀನಿವಾಸ್ ಶೇಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





