ನವೆಂಬರ್‌ನಲ್ಲಿ ಎಐಐಎಂಎಸ್ ಹಿರಿಯ ವೈದ್ಯರ ಸ್ಪರ್ಧಾತ್ಮಕ ಪರೀಕ್ಷೆ

ಹೊಸದಿಲ್ಲಿ,ಸೆ.29: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ತನ್ನ ಹಿರಿಯ ನಿವಾಸಿ ವೈದ್ಯರು/ಹಿರಿಯ ಪ್ರದರ್ಶಕರ ಹುದ್ದೆಗೆ ನೇಮಕಾತಿಗೆ ನವೆಂಬರ್ 24ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.
ಈ ಪರೀಕ್ಷೆ ದಿಲ್ಲಿ/ಎನ್‌ಸಿಆರ್, ಮುಂಬೈ, ಕೋಲ್ಕತಾ ಮತ್ತು ಚೆನ್ನೈಯಲ್ಲಿ ನಡೆಯಲಿವೆ ಎಂದು ಏಮ್ಸ್‌ನ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಭಾರತ ಸರಕಾರದ ರೆಸಿಡೆನ್ಸಿ ಯೋಜನೆಯಂತೆ ಗರಿಷ್ಟ ಮೂರು ವರ್ಷಗಳ ಅವಧಿಗೆ ಹಿರಿಯ ನಿವಾಸಿ ವೈದ್ಯರು/ಹಿರಿಯ ಪ್ರದರ್ಶಕರ ಹುದ್ದೆಗೆ ಭಾರತೀಯ ನಾಗರಿಕರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಸದ್ಯ ಖಾಲಿ ಬಿದ್ದಿರುವ ಹುದ್ದೆಗಳು, ಎಸ್ಟಿ, ಎಸ್ಸಿ, ಒಬಿಸಿ ವರ್ಗದಲ್ಲಿ ಬಾಕಿಯುಳಿದಿರುವ ಹುದ್ದೆಗಳು ಮತ್ತು 2020ರ ಜನವರಿ 1ರಿಂದ ಜೂನ್ 30ರ ಮಧ್ಯೆ ಖಾಲಿಯಾಗಲಿರುವ ಹುದ್ದೆಗಳು ಈ ಪೈಕಿ ಸೇರಿವೆ. ಅಭ್ಯರ್ಥಿಗಳು ಏಮ್ಸ್‌ನ ಅಧಿಕೃತ ಜಾಲತಾಣ aiimsexam.org ನಲ್ಲಿ ಅಕ್ಟೋಬರ್ 15ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಇದೇ ವೇಳೆ ಏಮ್ಸ್ ನವೆಂಬರ್‌ನಲ್ಲಿ ಪಿಜಿ ಕೋರ್ಸ್‌ಗಳಿಗೂ ಪ್ರವೇಶ ಪರೀಕ್ಷೆ ನಡೆಸಲಿದೆ. ಏಮ್ಸ್‌ನ ಇತ್ತೀಚಿನ ಪ್ರಕಟನೆಯ ಪ್ರಕಾರ ನವೆಂಬರ್ 17ರಂದು ಪ್ರವೇಶ ಪರೀಕ್ಷೆ ನಿಗದಿಯಾಗಿದೆ. ಪರೀಕ್ಷೆ ನಡೆದ ಐದು ದಿನಗಳ ಒಳಗೆ ಫಲಿತಾಂಶ ಹೊರಬೀಳಲಿದೆ. ಏಮ್ಸ್‌ನ ಪಿಜಿ ಪ್ರವೇಶ ಪರೀಕ್ಷೆಗೆ ಅಕ್ಟೋಬರ್ 14ರ ವರೆಗೆ ನೋಂದಾವಣೆ ಪ್ರಕ್ರಿಯೆ ನಡೆಯಲಿದೆ.





