ಸಾರ್ವಜನಿಕ ಮೂತ್ರ ವಿಸರ್ಜನೆ: 31,280 ರೂ. ದಂಡ ವಸೂಲಿ
ಬೆಂಗಳೂರು, ಸೆ.29: ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದವರಿಗೆ ಬಿಬಿಎಂಪಿ ಮಾರ್ಷಲ್ಗಳು ದಂಡ ವಿಧಿಸುತ್ತಿದ್ದು, ಸೆ.1ರಿಂದ ಸೆ.24ರ ವರೆಗೆ 31,280 ರೂ. ದಂಡ ವಸೂಲಿ ಮಾಡಿದ್ದಾರೆ.
ಸೆ.1ರಿಂದ ಸೆ.24ರ ವರೆಗೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ, ಪ್ಲಾಸ್ಟಿಕ್ ಬಳಸುವವರಿಗೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡಿದವರಿಗೆ ಮಾರ್ಷಲ್ ದಂಡ ವಿಧಿಸುತ್ತಾರೆ. ಇದುವರೆಗೂ ವಿವಿಧ ದಂಡಗಳಿಂದ ಸುಮಾರು 9.95 ಲಕ್ಷ ರೂ.ಗಳಷ್ಟು ವಸೂಲಿ ಮಾಡಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಂದ 5,47,795 ರೂ., ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಬ್ಲಾಕ್ ಸ್ಪಾಟ್ ಸೃಷ್ಟಿ ಮಾಡುವರಿಂದ 4,16,180 ರೂ. ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರಿಂದ 31,280 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಂದೀಪ್ ತಿಳಿಸಿದ್ದಾರೆ. ಸೆ.1ರಿಂದ 232 ಮಾರ್ಷಲ್ಗಳನ್ನು (ನಿವೃತ್ತ ಸೈನಿಕರು) ಪಾಲಿಕೆ ನೇಮಕ ಮಾಡಿಕೊಂಡಿತ್ತು. 160 ವಾರ್ಡ್ಗಳಲ್ಲಿ ಮಾರ್ಷಲ್ಗಳು ವಿವಿಧ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ.