ನಮ್ಮ ಮೆಟ್ರೋ ಭೂ ಸ್ವಾಧೀನ ಪ್ರಕ್ರಿಯೆಗೆ ಅಡ್ಡಿ

ಬೆಂಗಳೂರು, ಸೆ.29 : ನಮ್ಮ ಮೆಟ್ರೊ 2ನೆ ಹಂತದ ಕಾಮಗಾರಿ ಭೂಸ್ವಾಧಿನ ಪ್ರಕ್ರಿಯೆ ತಲೆನೋವಾಗಿ ಪರಿಣಮಿಸಿದ್ದು, 8 ಕಡೆ ಭೂಮಿ ಪಡೆಯಲಾಗದೆ ಕಾಮಗಾರಿ ಆಮೆಗತಿಯಲ್ಲಿ ಸಾಗುವಂತಾಗಿದೆ.
ನಮ್ಮ ಮೆಟ್ರೊ 2ನೇ ಹಂತದಲ್ಲಿ 72 ಕಿ.ಮಿ. ಮಾರ್ಗ ನಿರ್ಮಿಸಲಾಗುತ್ತಿದೆ. ಯೋಜನೆಗಾಗಿ 200 ಹೆಕ್ಟೇರ್ ಭೂಮಿಯ ಅವಶ್ಯಕತೆಯಿದ್ದು, ಅದರಲ್ಲಿ ಶೇ.90 ಭಾಗ ಭೂಸ್ವಾಧಿನ ಮಾಡಿಕೊಳ್ಳಲಾಗಿದೆ. ಉಳಿದ ಭೂಸ್ವಾಧಿನಕ್ಕೆ ಸಾಕಷ್ಟು ಅಡೆ ತಡೆಯುಂಟಾಗುತ್ತಿದ್ದು, ಅದರಿಂದ ಕಾಮಗಾರಿ ವಿಳಂಬವಾಗುವಂತಾಗಿದೆ.
8 ಕಡೆ ಅಡೆತಡೆ: ರೀಚ್ 5 ಕಾಮಗಾರಿಗೆ ಅಗತ್ಯವಿರುವ ನೈಸ್ ರಸ್ತೆಗೆ ಸೇರಿದ ಭೂಮಿ ಸ್ವಾಧಿನಕ್ಕೆ ಹೈಕೊರ್ಟ್ನಿಂದ ತಡೆ ನೀಡಲಾಗಿದೆ. ಅದರ ಜತೆಗೆ ಕಾಡುಗುಡಿ ಬಳಿ ವೈಟ್‌ಫೀಲ್ಡ್ ಡಿಪೋ ನಿರ್ಮಾಣಕ್ಕೆ ಮತ್ತು ಯು.ಎಂ. ಕಾವಲ್‌ನಲ್ಲಿ ಅಂಜನಾಪುರ ಡಿಪೋ ನಿರ್ಮಾಣಕ್ಕೆ ಅರಣ್ಯ ಭೂಮಿಯ ಅವಶ್ಯಕತೆಯಿದೆ. ಮೊದಲನೇ ಹಂತದ ಅನುಮತಿ ನೀಡಲಾಗಿದ್ದರೂ, 2ನೇ ಹಂತದ ಅನುಮತಿ ದೊರೆಯಬೇಕಿದೆ.
Next Story