ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿ ವತಿಯಿಂದ 'ಇಶಾರ ಮೀಟ್'

ಬಂಟ್ವಾಳ, ಸೆ.29: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಇಶಾರ ಅಭಿಯಾನದ ಅಂಗವಾಗಿ 'ಇಶಾರ ಮೀಟ್' ಕಾರ್ಯಕ್ರಮವು ಬಿ.ಸಿ.ರೋಡ್ ನ ಎಸ್ಸೆಸ್ಸೆಫ್ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸಅದಿ ಹರೇಕಳ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲಿ ತುರ್ಕಳಿಕೆ ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಇಶಾರ ಚೇರ್ಮೇನ್ ಹಾಫಿಳ್ ಯಾಕೂಬ್ ಸಅದಿ ನಾವೂರು, ಇಶಾರ ಕನ್ವೀನರ್ ಹುಸೈನ್ ಸಅದಿ ಹೊಸ್ಮಾರ್ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಜೊತೆ ಕಾರ್ಯದರ್ಶಿ ರಫೀಕ್ ಸುರತ್ಕಲ್, ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಙಳ್, ನವಾಝ್ ಸಖಾಫಿ ಅಡ್ಯಾರ್, ರಿಯಾಝ್ ಸಅದಿ ಗುರುಪುರ, ರಝಾಕ್ ಸಅದಿ ಕೊಡಿಪ್ಪಾಡಿ, ದಾವೂದುಲ್ ಹಕೀಂ ಕಳಂಜಿಬೈಲ್, ಮುಸ್ತಫ ಉರುವಾಲುಪದವು, ಸುಹೈಲ್ 10th ಮೈಲ್, ಮುಸ್ತಫ ಮುಕ್ಕಚ್ಚೇರಿ ಸೇರಿ ಅನೇಕರು ಉಪಸ್ಥಿತರಿದ್ದರು.
ಜಿಲ್ಲಾ ಇಶಾರ ಕನ್ವೀನರ್ ಪೈಝಲ್ ಝುಹ್ರಿ ಕಲ್ಲುಗುಂಡಿ ಸ್ವಾಗತಿಸಿ, ರಫೀಕ್ ಸುರತ್ಕಲ್ ವಂದಿಸಿದಿರು.








