ಹರ್ಯಾಣ ವಿಧಾನಸಭಾ ಚುನಾವಣೆ: ಯೋಗೇಶ್ವರ್ ದತ್, ಬಬಿತಾ ಫೋಗಟ್ ರನ್ನು ಕಣಕ್ಕಿಳಿಸಿದ ಬಿಜೆಪಿ

ಹರ್ಯಾಣದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕುಸ್ತಿಪಟುಗಳಾದ ಯೋಗೇಶ್ವರ್ ದತ್ ಮತ್ತು ಬಬಿತಾ ಫೋಗಟ್ ರಿಗೆ ಬರೋಡಾ ಮತ್ತು ದಾದ್ರಿಯಿಂದ ಟಿಕೆಟ್ ನೀಡಿದೆ. ಈ ಇಬ್ಬರು ಮಾತ್ರವಲ್ಲದೆ ಭಾರತ ಹಾಕಿ ತಂಡದ ಮಾಜಿ ಕಪ್ತಾನ ಸಂದೀಪ್ ಸಿಂಗ್ ರನ್ನು ಪೆಹೋವಾದಿಂದ ಕಣಕ್ಕಿಳಿಸಿದೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕರ್ನಾಲ್ ನಿಂದ ಸ್ಪರ್ಧಿಸಲಿದ್ದಾರೆ. ಇತ್ತೀಚೆಗಷ್ಟೇ ಯೋಗೇಶ್ವರ್ ದತ್ ಮತ್ತು ಸಂದೀಪ್ ಸಿಂಗ್ ಬಿಜೆಪಿ ಸೇರಿದ್ದರು.
Next Story