ಮಂಗಳೂರು: ಅಂತಾರಾಷ್ಟ್ರೀಯ ವಿಶಿಷ್ಟ ಮಕ್ಕಳ ಸಂಗಮ ಉದ್ಘಾಟನೆ

ಮಂಗಳೂರು, ಸೆ.30: ಅನಂ ಪ್ರೇಮ್ ಸಮಾಜ ಸೇವಾ ಸಂಸ್ಥೆ, ಮುಂಬೈಯ ಹೆಲನ್ ಕೆಲ್ಲರ ಇನ್ಸಿಟ್ಯೂಟ್ ಫಾರ್ ಡೀಫ್ ಆ್ಯಂಡ್ ಡೀಫ್ ಬ್ಲ್ಲೈಂಡ್ ಸಂಸ್ಥೆಯ ವತಿಯಿಂದ ಸೋಮವಾರ ನಗರದ ಸಂಘ ನಿಕೇತನದಲ್ಲಿ ವಿಶಿಷ್ಟ ಮಕ್ಕಳ ಸಂಗಮ ಜರುಗಿತು.
ಈ ಸಂದರ್ಭ ಪ್ರವಾಸಿ ತಾಣಗಳಲ್ಲಿ ವಿಶಿಷ್ಟಚೇತನರನ್ನು ನೇಮಿಸಿಕೊಳ್ಳಬೇಕು ಎಂದು ವಿಶಿಷ್ಟ ಚೇತನರ ಸಂಘದ ಮುಖಂಡರ ಬೇಡಿಕೆ ಪ್ರತಿಕ್ರಿಯಿಸಿದ ಸಚಿವ ಸಿಟಿ ರವಿ ವಿಶಿಷ್ಟ ಚೇತನರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸ್ಥಳ ಪರಿಚಯ ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಅದಕ್ಕಾಗಿ ಪ್ರವಾಸಿ ತಾಣಗಳಲ್ಲಿ ಕಿವುಡರು ಮತ್ತು ಮೂಗರಿಗೆ ಅನುಕೂಲವಾಗುವಂತೆ ವಿಶಿಷ್ಟಚೇತನರನ್ನು ನೇಮಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ವೇದವ್ಯಾಸ್ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಬಿರದಲ್ಲಿ 540 ಮಂದಿ ಭಾಗವಹಿಸಿದ್ದು ಅವರಲ್ಲಿ ಉತ್ತರಪ್ರದೇಶ, ಸೂರತ್, ಕಾನ್ಪುರ, ಶ್ರೀಲಂಕಾದ ವಿದ್ಯಾರ್ಥಿಗಳು ಕೂಡ ಇದ್ದಾರೆ. ಕಾರ್ಯಕ್ರಮದಲ್ಲಿ ನವೀನ್ ಕಾರ್ಡೋಜ, ರೊನಾಲ್ಡ್ ಗೊಮ್ಸ್, ಪ್ರಶಾಂತ್ ಪೈ, ಮುಕುಂದ್ ಕಾಮತ್, ಐಡಿಯಲ್, ರವಿಶಂಕರ್ ಮಿಜಾರ್, ಹರೀಶ್ ಆಚಾರ್ಯ, ಶರತ್ ಆರ್ ಪೈ, ಮೋಹನ್ ಬೆಂಗ್ರೆ, ಕಿಶೋರ್ ರೈ, ಜಗದೀಶ್ ಶೇಣವ, ಸುಧೀರ್, ಯೋಗೀಶ್ ದೇಸಾಯಿ, ಅನಮ್ ಪ್ರೇಮ್, ಪ್ರಶಾಂತ್ ಭಟ್, ಶ್ರೆನಿವಾಸ್ ಶೇಟ್ ಉಪಸ್ಥಿತರಿದ್ದರು.
ಸಂಯೋಜಕ ಸಂಜಯ್ ಪ್ರಭು ವಂದಿಸಿದರು.







