ರಮೇಶ್ ಅಳಿಕೆಗೆ ಡಾಕ್ಟರೇಟ್

ಮಂಗಳೂರು, ಸೆ.30: ಬದ್ರಿಯಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ರಮೇಶ್ ಬಿ. ಅಳಿಕೆ ಅವರು ಮಂಗಳೂರು ವಿವಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಸೋಮಣ್ಣ ಹೊಂಗಳ್ಳಿ ಮಾರ್ಗದರ್ಶನದಲ್ಲಿ ಸಲ್ಲಿಸಿದ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಡಿ.ಕೆ.ಚೌಟರ ಕೃತಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿ ಮತ್ತು ಪಲ್ಲಟದ ತಲ್ಲಣಗಳು ಎಂಬ ಸಂಶೋಧನಾ ಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಲಭಿಸಿದೆ. ಇವರು ದಿ.ಶಂಕರ ಪಾಟಾಳಿ ಅಳಿಕೆ ಮತ್ತು ದೇವಮ್ಮ ಅವರ ಪುತ್ರ.
Next Story





