ಕೆಎಸ್‌ಸಿಎ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಎಂ.ಎಂ.ಹರೀಶ್ ಸ್ಪರ್ಧೆ
ಬೆಂಗಳೂರು, ಸೆ.30: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಆಡಳಿತ ಸಮಿತಿ ಚುನಾವಣೆ ಅ.3ರಂದು ನಡೆಯಲಿದ್ದು, ಸ್ವಚ್ಛ ಕ್ರಿಕೆಟ್ ತಂಡದ ವಿವಿಧ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂ.ಎಂ.ಹರೀಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಸಿಎನಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ. ಕ್ರಿಕೆಟ್ ಅನ್ನು ದಂಧೆಯನ್ನಾಗಿ ಮಾಡಿಕೊಂಡು ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್‌ಗಳಿಗೆ ಹೆಸರಾಗುತ್ತಿದೆ. ವಿಶ್ವಕ್ಕೆ ಕ್ರಿಕೆಟ್ ದಿಗ್ಗಜರನ್ನು ಕೊಡುಗೆಯಾಗಿ ನೀಡಿರುವ ಕೆಎಸ್‌ಸಿಎಗೆ ಈ ರೀತಿಯ ಕಳಂಕಗಳು ಕಪ್ಪುಚುಕ್ಕೆಯಂತಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಆಡಳಿತ ಸಮಿತಿಯಲ್ಲಿ ಯಾವುದೇ ಪಾರದರ್ಶಕತೆ ಕಾಣುತ್ತಿಲ್ಲ. ಆಡಳತವೇ ಮುಚ್ಚುಮರೆಯಲ್ಲಿ ನಡೆಯುತ್ತಿದೆ. ಹೊರ ರಾಜ್ಯದ ಕ್ರೀಡಾಳುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಆಡಳಿತ ಮಂಡಳಿಯು, ರಾಜ್ಯದ ಯುವ ಕ್ರೀಡಾಳುಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.
Next Story