ಚೀನಾ: ಕಾರ್ಖಾನೆಯಲ್ಲಿ ಬೆಂಕಿ; 19 ಸಾವು
ಬೀಜಿಂಗ್, ಸೆ. 30: ಪೂರ್ವ ಚೀನಾದ ಕಾರ್ಖಾನೆಯೊಂದರಲ್ಲಿ ನಡೆದ ಬೆಂಕಿ ದುರಂತದಲ್ಲಿ 19 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಪೂರ್ವ ಝೆಜಿಯಾಂಗ್ ಪ್ರಾಂತದ ನಿಂಘೈ ಕೌಂಟಿಯಲ್ಲಿರುವ ಕಾರ್ಖಾನೆಯೊಂದರಲ್ಲಿ ರವಿವಾರ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯ ಸರಕಾರವು ತನ್ನ ವೈಬೊ ಖಾತೆಯಲ್ಲಿ ತಿಳಿಸಿದೆ.
ಬೆಂಕಿಯಿಂದ 8 ಮಂದಿಯನ್ನು ರಕ್ಷಿಸಲಾಗಿದೆ. ಆ ಪೈಕಿ ಗಾಯಗೊಂಡಿರುವ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Next Story