ಬಂಟ್ವಾಳ: ಪದನ್ನೋತಿ ಹೊಂದಿ ಉಡುಪಿಗೆ ವರ್ಗಾವಣೆಗೊಂಡ ಅಧಿಕಾರಿಗೆ ಸನ್ಮಾನ

ಬಂಟ್ವಾಳ : ಬಂಟ್ವಾಳ ತಾಲೂಕು ಕಚೇರಿಯಿಂದ ಪದನ್ನೋತಿ ಹೊಂದಿ ಉಡುಪಿಗೆ ವರ್ಗಾವಣೆಗೊಂಡ ವಾಸು ಶೆಟ್ಟಿ ಹಾಗೂ ನಿವೃತ್ತ ಡಿಟಿ ಬಿ.ಆರ್.ಪುಟ್ಟ ಸ್ವಾಮಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ಬಿ.ಸಿ.ರೋಡ್ ನಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್, ಪದನ್ನೋತಿ ಹಾಗೂ ನಿವೃತ್ತಿಯ ಬೀಳ್ಕೊಡುಗೆ ಏಕಕಾಲದಲ್ಲಿ ನಡೆಯುತ್ತಿದ್ದು, ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಅನುಭವ. ಈಗಾಗಲೇ ನೂತನವಾಗಿ ಬಂಟ್ವಾಳಕ್ಕೆ ನಿಯುಕ್ತಿಗೊಂಡ ಇಬ್ಬರು ಡಿಟಿಗಳಿಗೆ ಇಲ್ಲಿನ ಎಲ್ಲ ಸಿಬ್ಬಂದಿ ಸಹಕರಿಸುವಂತೆ ತಿಳಿಸಿದರು.
ಪಾಣೆಮಂಗಳೂರು ನಾಡಕಚೇರಿ ಡಿಟಿ ರೂಪೇಶ್, ಸಾಮಾಜಿಕ ಭದ್ರತೆ ಡಿಟಿಯಾದ ರಾಧಾಕೃಷ್ಣ ಅವರು ತಾಲೂಕು ಆಡಳಿತ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳಾದ ರಾಜೇಶ್, ಶ್ರೀಧರ, ರವಿಶಂಕರ್, ದಿವಾಕರ, ನಿಸಾರ್ ಅಹ್ಮದ್, ಪ್ರಸನ್ನ ಪಕ್ಕಳ, ಜನಾರ್ದನ ಹಾಜರಿದ್ದರು.
ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು. ಗ್ರಾಮಕರಣಿಕ ನವೀನ್ ಕುಮಾರ್ ವಂದಿಸಿದರು.









