ಅ. 2ರಂದು ಪಾದುವ ಕಾಲೇಜಿನಲ್ಲಿ 'ಗಾಂಧಿ ನಮನ'

ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಪಾದುವ ಕೊಲೇಜ್ ಆಫ್ ಕೊಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ "ಗಾಂಧಿ ನಮನ" ಎಂಬ ಕಾರ್ಯಕ್ರಮವನ್ನು ಕಾಲೇಜಿನ ಸಭಾಂನಗಣದಲ್ಲಿ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಮೊದಲಿಗೆ ಮಧ್ಯಾಹ್ನ 3 ಗಂಟೆಗೆ ಪಾದುವ ರಂಗ ಅಧ್ಯಯನ ಕೇಂದ್ರ ಹಾಗೂ ಅಸ್ತಿತ್ವ ಮಂಗಳೂರು ಆಯೋಜಿಸುವ ತಿಂಗಳ ಸಿನೇಮಾ ಕಾರ್ಯಕ್ರಮದಲ್ಲಿ, ರಿಚರ್ಡ್ ಅಟೆನ್ಬರೋ ನಿರ್ದೇಶನದ ಬೆನ್ ಕಿಂಗ್ಸ್ ಲೀ ಅಭಿನಯದ 'ಗಾಂಧಿ' ಸಿನೆಮಾದ ಪ್ರದರ್ಶನವಿದೆ.
ನಂತರ ಸಂಜೆ 6ಕ್ಕೆ ಗಾಂಧಿ ನಮನ ಕಾರ್ಯಕ್ರಮದಲ್ಲಿ ಗಾಂಧಿ ಭಜನೆ, ಗಾಂಧಿ ಆತ್ಮಕಥೆಯ ಓದು, ಪವಿತ್ರ ಆರ್ಥಿಕತೆಯ ಮೇಲೆ ವಿಚಾರಧಾರೆ, ಗಾಂಧಿ ನನಗೇಕೆ ಇಷ್ಟ ಹಾಗೂ ಗಾಂಧಿ ಬಗ್ಗೆ ನನ್ನ ನಿಲುವು ಎಂಬಿತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.
Next Story





