ಭಾರತೀಯ ಬ್ಯಾಂಕ್ಗಳು ಸುರಕ್ಷಿತ: ಆರ್ಬಿಐ
ಹೊಸದಿಲ್ಲಿ, ಅ. 1: ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಸುರಕ್ಷಿತ ಹಾಗೂ ಸ್ಥಿರವಾಗಿದೆ. ಆತಂಕಪಡುವ ಅಗತ್ಯ ಇಲ್ಲ ಎಂದು ಆರ್ಬಿಐ ಭರವಸೆ ನೀಡಿದೆ.
ನಿರ್ದಿಷ್ಟ ವಾಣಿಜ್ಯ ಹಾಗೂ ಕೋ-ಆಪರೇಟಿವ್ ಬ್ಯಾಂಕ್ಗಳ ಬಗೆಗಿನ ವದಂತಿಗಳು ಹಾಗೂ ಅದು ಠೇವಣಿದಾರರಲ್ಲಿ ಆತಂಕಕ್ಕೆ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಆರ್ಬಿಐ ಈ ಸ್ಪಷ್ಟನೆ ನೀಡಿದೆ. ಕೋ-ಆಪರೇಟಿವ್ ಬ್ಯಾಂಕ್ಗಳ ಸಹಿತ ನಿರ್ದಿಷ್ಟ ಬ್ಯಾಂಕ್ಗಳ ಬಗ್ಗೆ ಕೆಲವು ಕಡೆಗಳಲ್ಲಿ ವದಂತಿ ಹರಡಿವೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುರಕ್ಷಿತ ಹಾಗೂ ಸ್ಥಿರವಾಗಿದೆ. ವದಂತಿಗಳ ಹಿನ್ನೆಲೆಯಲ್ಲಿ ಆತಂಕಪಡುವ ಅಗತ್ಯ ಇಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಲು ಆರ್ಬಿಐ ಬಯಸುತ್ತದೆ ಎಂದು ಆರ್ಬಿಐ ಹೇಳಿದೆ.
ಕಳೆದ ವಾರ, ಸರಕಾರ ಅಧೀನದ 9 ಬ್ಯಾಂಕ್ಗಳು ಮುಚ್ಚಲಿವೆ ಎಂಬ ಸಾಮಾಜಿಕ ಮಾದ್ಯಮದ ವರದಿಯನ್ನು ನಿರಾಕರಿಸಿ ಆರ್ಬಿಐ ಹೇಳಿಕೆ ಬಿಡುಗಡೆ ಮಾಡಿತ್ತು.
Next Story