ಎಸ್ ವೈ ಎಸ್ ಮೇಲಂಗಡಿ: ನೂತನಾಧ್ಯಕ್ಷರಾಗಿ ಬಶೀರ್ ಸಖಾಫಿ ಪುನರಾಯ್ಕೆ

ಉಳ್ಳಾಲ: ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಮಹಾಸಭೆ ಹಾಗು ನೂತನ ಸಮಿತಿ ರಚನಾ ಕಾರ್ಯಕ್ರಮ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಮೇಲಂಗಡಿಯ ತಾಜುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಿತು.
ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕಾದರ್ ಸ್ವಾಗತಿಸಿ, ವರದಿ ವಾಚಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಉಳ್ಳಾಲ ಸೆಂಟರ್ ಎಸ್ ವೈ ಎಸ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಙಳ್ ಹಾಗು ದ.ಕ ಜಿಲ್ಲಾ ಎಸ್ ವೈ ಎಸ್ ಕೋಶಾಧಿಕಾರಿ ಬಿಜಿ ಹನೀಫ್ ಹಾಜಿ ರವರ ನೇತ್ರತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಬಶೀರ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕಾದರ್ ಮೇಲಂಗಡಿ ಪುನರಾಯ್ಕೆಯಾದರು.
ಕೋಶಾಧಿಕಾರಿಯಾಗಿ ಸತ್ತಾರ್ ಫಿರ್ದೌಸ್, ಉಪಾಧ್ಯಕ್ಷರಾಗಿ ಯೂಸುಫ್ ಹಾಜಿ, ಜೊತೆ ಕಾರ್ಯದರ್ಶಿಗಳಾಗಿ ಜಮಾಲ್ ಉಸ್ತಾದ್, ಇಸಾಕ್ ಪೇಟೆ, ಮೆಹರಲಿ ರವರನ್ನು ಆರಿಸಲಾಯಿತು. ಸೆಂಟರ್ ಕೌನ್ಸಿಲರುಗಳಾಗಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಸಹಿತ ಹನೀಫ್ ಮದನಿ ಮೇಲಂಗಡಿ, ಝೈನುದ್ದೀನ್ ಮೇಲಂಗಡಿ, ಕರೀಂ ಹಾಜಿ, ಇಲ್ಯಾಸಾಕ ಬಂಡಿಕೊಟ್ಯ, ಫಾರೂಕ್ ಯುಕೆ, ಇಸಾಕ್ ಪೇಟೆ, ಇಸ್ಮಾಯೀಲ್, ಅಶ್ರಫ್ ಗುಂಡಿಹಿತ್ಲು, ಯೂಸುಫ್ ಹಾಜಿ ಹಾಗು ಅಬ್ದುಲ್ ಸಮದ್ ರವರನ್ನು ಆಯ್ಕೆಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮೇಲಂಗಡಿ ಎಸ್ ವೈ ಎಸ್ ನೇತಾರರು ಕಾರ್ಯಕರ್ತರು ಭಾಗವಹಿಸಿದರು.







