ಬಂಟ್ವಾಳ ಕೆಳಗಿನಪೇಟೆ: ಕುಡಿಯುವ ನೀರು ಚರಂಡಿ ಪಾಲು

ಬಂಟ್ವಾಳ, ಅ. 1: ಬಂಟ್ವಾಳದ ಕೆಳಗಿಪೇಟೆಯ ಎರಡು ಕಡೆಗಳಲ್ಲಿ ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ. ಕೆಳಗಿನಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿರುವ ಪೈಪ್‍ಲೈನ್ ಒಡೆದು ನೀರು ಪೋಲಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಗಮನಕ್ಕೂ ಬಂದರೂ ಸಂಬಂಧಪಟ್ಟವರು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ. ಅದಲ್ಲದೆ, ಇದಕ್ಕು ಮೊದಲು ಈ ವಾರ್ಡ್‍ನ ಸದಸ್ಯರೇ ಸರಿ ಮಾಡಿದ್ದು, ಪೈಪ್‍ಲೈನ್ ಮತ್ತೆ ಒಡೆದು ಹೋಗಿದೆ ಎಂದು ಸಾರ್ವಜನಿಕರು ಆರೋಪಿದ್ದಾರೆ.
ದಿನದ 24 ಗಂಟೆಗಳ ಕಾಲ ನಿರಂತರವಾಗಿ ನೀರು ಪೋಲಾಗುತ್ತಿದೆ. ಪುರಸಭೆಯಗಮನಕ್ಕೆ ಬಂದರೂ, ಸರಿಪಡಿಸಲು ದಿನದೂಡುತ್ತಿದೆ. ಪೈಪ್‍ಲೈನ್ ದುರಸ್ಥಿ ಮಾಡದೇ ಇದ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
Next Story





