ಡಿ.19ಕ್ಕೆ ಕೋಲ್ಕತಾದಲ್ಲಿ ಐಪಿಎಲ್ ಆಟಗಾರರ ಹರಾಜು
ಹೊಸದಿಲ್ಲಿ, ಅ.1: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (ಐಪಿಎಲ್)ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ಮೊದಲ ಬಾರಿ ಕೋಲ್ಕತಾ ನಗರದಲ್ಲಿ ನಡೆಯಲಿದೆ.
ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತಾ ಬಾಲಿವುಡ್ ತಾರೆ ಶಾರೂಕ್‌ಖಾನ್ ಸಹ ಮಾಲಕತ್ವದ ಕೋಲ್ಕತಾ ನೈಟ್ ರೈಡರ್ಸ್‌ನ ತವರು ಪಟ್ಟಣವಾಗಿದೆ. ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಈವರೆಗೆ ಹೆಚ್ಚಾಗಿ ಬೆಂಗಳೂರು ನಗರದಲ್ಲೇ ನಡೆಯುತ್ತಿತ್ತು.
ಟ್ರೇಡಿಂಗ್ ವಿಂಡೋ ಈಗ ತೆರೆಯಲಾಗಿದ್ದು, ನ.14ಕ್ಕೆ ಇಂದು ಮುಚ್ಚಲಿದೆ. ಈ ಕುರಿತು ಸೋಮವಾರ ಎಲ್ಲ ಫ್ರಾಂಚೈಸಿಗಳಿಗೆ ಮಾಹಿತಿ ನೀಡಲಾಗುತ್ತದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್‌ಫೋ ವರದಿ ಮಾಡಿದೆ.
2019ರ ಐಪಿಎಲ್‌ನಲ್ಲಿ ಪ್ರತಿ ಫ್ರಾಂಚೈಸಿಗೆ 82 ಕೋ.ರೂ. ವ್ಯಯಿಸಲು ಅವಕಾಶ ನೀಡಲಾಗಿತ್ತು. 2020ರ ಋತುವಿನಲ್ಲಿ 85 ಕೋ.ರೂ. ಖರ್ಚು ಮಾಡಲು ಅವಕಾಶ ನೀಡಲಾಗಿದೆ.
Next Story





