ಕ್ರೆಗ್ ಬ್ರಾತ್‌ವೇಟ್ ಬೌಲಿಂಗ್ ಶೈಲಿಗೆ ಕ್ಲೀನ್‌ಚಿಟ್ ನೀಡಿದ ಐಸಿಸಿ
ದುಬೈ, ಅ.1: ವೆಸ್ಟ್‌ಇಂಡೀಸ್‌ನ ಕ್ರೆಗ್ ಬ್ರಾತ್‌ವೇಟ್ ಐಸಿಸಿಯಿಂದ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದಾರೆ. ಕೆರಿಬಿಯನ್ ಆಟಗಾರನ ಬೌಲಿಂಗ್ ಶೈಲಿ ಅಕ್ರಮವಾಗಿತ್ತು ಎಂದು ಐಸಿಸಿ ಈ ಹಿಂದೆ ಹೇಳಿತ್ತು. ಆಫ್-ಸ್ಪಿನ್ ಬೌಲಿಂಗ್ ಮಾಡುವ ಆಲ್‌ರೌಂಡರ್ ಬ್ರಾತ್‌ವೇಟ್ ಬೌಲಿಂಗ್ ಶೈಲಿಯ ಕುರಿತು ಸೆ.2 ರಂದು ನಡೆದ ಭಾರತ ವಿರುದ್ಧ 2ನೇ ಟೆಸ್ಟ್‌ನಲ್ಲಿ ಸಂಶಯ ವ್ಯಕ್ತಪಡಿಸಲಾಗಿತ್ತು. ಬ್ರಾತ್‌ವೇಟ್ ಸೆ.14 ರಂದು ಬ್ರಿಟನ್‌ನ ಲಾಫ್‌ಬರಫ್‌ನಲ್ಲಿ ಬೌಲಿಂಗ್ ಶೈಲಿಯ ವೌಲ್ಯಮಾಪನಕ್ಕೆ ಒಳಗಾಗಿದ್ದರು.
Next Story





