ಹಾರ್ದಿಕ್‌ಗೆ ಗಾಯದ ಸಮಸ್ಯೆ

ಹೊಸದಿಲ್ಲಿ, ಅ.1: ಭಾರತದ ಪ್ರಮುಖ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಬಾಂಗ್ಲಾದೇಶ ವಿರುದ್ಧದ ಟ್ವೆಂಟಿ-20 ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಸದ್ಯ ಬೆನ್ನುನೋವಿನಿಂದ ಬಳಲುತ್ತಿರುವ ಪಾಂಡ್ಯ ದೀರ್ಘ ಸಮಯ ಕ್ರಿಕೆಟ್‌ನಿಂದ ದೂರ ಉಳಿಯುವ ಭೀತಿ ಎದುರಿಸುತ್ತಿದ್ದಾರೆ. ಹಾರ್ದಿಕ್ ತನ್ನ ಗಾಯದ ಸಮಸ್ಯೆಯನ್ನು ನಿರ್ಧರಿಸಲು ಶೀಘ್ರವೇ ಬ್ರಿಟನ್‌ಗೆ ತೆರಳಲಿದ್ದು, ಕಳೆದ ಸೆಪ್ಟಂಬರ್‌ನಲ್ಲಿ ದುಬೈನಲ್ಲಿ ನಡೆದಿದ್ದ ಏಶ್ಯಕಪ್ ವೇಳೆ ಗಾಯದ ಸಮಸ್ಯೆ ಮೊದಲು ಕಾಣಿಸಿಕೊಂಡಿತ್ತು. ಆಗ ತನ್ನನ್ನು ತಪಾಸಣೆ ನಡೆಸಿದ್ದ ವೈದ್ಯರನ್ನು ಪಾಂಡ್ಯ ಮತ್ತೆ ಭೇಟಿಯಾಗಲಿದ್ದಾರೆ. ಅವರು ಎಷ್ಟು ಸಮಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆಂದು ಸ್ಪಷ್ಟತೆಯಿಲ್ಲ. ಅವರು ಬ್ರಿಟನ್‌ನಿಂದ ವಾಪಸಾದ ಬಳಿಕವೇ ಎಲ್ಲವೂ ಗೊತ್ತಾಗಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಬರೋಡಾ ಆಲ್‌ರೌಂಡರ್ ಟೀಮ್ ಇಂಡಿಯದಿಂದ ಹೊರಗುಳಿಯುತ್ತಿರುವ 2ನೇ ಪ್ರಮುಖ ಆಟಗಾರ. ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಕೂಡ ಬೆನ್ನುನೋವಿನ ಕಾರಣದಿಂದ ಬುಧವಾರ ಆರಂಭವಾಗಲಿರುವ ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಂಡ್ಯ ಭಾರತದ ಅವಿಭಾಜ್ಯ ಅಂಗವಾಗಿದ್ದಾರೆ. 25ರ ಹರೆಯದ ಪಾಂಡ್ಯ ಈ ತನಕ 11 ಟೆಸ್ಟ್‌ನಲ್ಲಿ 532 ರನ್ ಹಾಗೂ 11 ವಿಕೆಟ್‌ಗಳು, 54 ಏಕದಿನ ಪಂದ್ಯದಲ್ಲಿ 937 ರನ್ ಹಾಗೂ 54 ವಿಕೆಟ್‌ಗಳು ಹಾಗೂ 40 ಟಿ-20 ಪಂದ್ಯಗಳಲ್ಲಿ 310 ರನ್ ಹಾಗೂ 38 ವಿಕೆಟ್‌ಗಳನ್ನು ಉರುಳಿಸಿದ್ದಾರೆ.





