ಗ್ರಾಮೀಣ ಭಾರತ ಸ್ವತಃ ‘ಬಯಲು ಶೌಚ ಮುಕ್ತ’ ಎಂದು ಘೋಷಿಸಿಕೊಂಡಿವೆ: ಪ್ರಧಾನಿ ಮೋದಿ

ಅಹ್ಮದಾಬಾದ್, ಅ. 2: ಇಂದು ಗ್ರಾಮೀಣ ಭಾರತ ಹಾಗೂ ಅದರ ಗ್ರಾಮಗಳು ಸ್ವತಃ ‘ಬಯಲು ಶೌಚ ಮುಕ್ತ’ ಎಂದು ಘೋಷಿಸಿಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದರು.
ಅಹ್ಮದಾಬಾದ್‌ನ ಸಬರಮತಿ ಆಶ್ರಮದ ನದಿ ದಂಡೆಯಲ್ಲಿ ಮಾತನಾಡಿದ ಪ್ರಧಾನಿ, ಶುಚಿತ್ವ, ಪರಿಸರ ಹಾಗೂ ಪ್ರಾಣಿಗಳು ಗಾಂಧೀಜಿ ಅವರಿಗೆ ಪ್ರಿಯವಾಗಿತ್ತು ಎಂದರು.
ಪ್ಲಾಸ್ಟಿಕ್ ನಮ್ಮೆಲ್ಲರಿಗೂ ಪ್ರಮುಖ ಬೆದರಿಕೆ. ಆದುದರಿಂದ ನಾವು ಏಕಬಳಕೆ ಪ್ಲಾಸ್ಟಿಕ್ ಅನ್ನು ನಿರ್ಮೂಲಗೊಳಿಸಲು ಪಣ ತೊಡಬೇಕು. ಏಕಬಳಕೆ ಮುಕ್ತ ಭಾರತದ ಗುರಿಯನ್ನು 2022ರ ಹೊತ್ತಿಗೆ ಸರಕಾರ ಸಾಧಿಸಲಿದೆ ಎಂದು ಪ್ರಧಾನಿ ಅವರು ಹೇಳಿದರು.
ಬಾಪು ಅವರ ಜನ್ಮ ದಿನಾಚರಣೆಯನ್ನು ವಿಶ್ವವೇ ಆಚರಿಸುತ್ತಿದೆ. ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆ ಈ ಸಂಭ್ರಮವನ್ನು ಸ್ಮರಣೀಯಗೊಳಿಸಲು ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಿದೆ. ಈಗ ನಾವು ಬಾಪು ಅವರ ನೆನಪಿನಲ್ಲಿ ಸ್ಟಾಂಪ್ ಹಾಗೂ ನಾಣ್ಯಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಅವರು ಹೇಳಿದರು.
Next Story