ಕುಂದಾಪುರ: ಎಸ್ಸೆಸ್ಸೆಫ್‌ನಿಂದ ಮಾದಕದ್ರವ್ಯ ವಿರುದ್ಧ ಜನಜಾಗೃತಿ

ಕುಂದಾಪುರ, ಅ.2: ಕರ್ನಾಟಕ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಕೋಟೇಶ್ವರ ಹಾಗೂ ಕೋಡಿ ಸೆಕ್ಟರ್‌ಗಳ ಜಂಟಿ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗ ವಾಗಿ ಮಾದಕದ್ರವ್ಯ ವಿರುದ್ಧ ಜನಜಾಗೃತಿ ಕಾರ್ಯಕ್ರಮವನ್ನು ಕುಂದಾಪುರ ಶಾಸ್ತ್ರಿ ಸರ್ಕಲ್‌ನಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಎಸ್‌ಎಸ್‌ಎಫ್ ಕುಂದಾಪುರ ಡಿವಿಷನ್ ಅಧ್ಯಕ್ಷ ಸಿದ್ದೀಕ್ ಸಖಾಫಿ ಹಂಗಳೂರು, ಕೋಟೇಶ್ವರ ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಸಅದಿ ಮೂಡುಗೊೀಪಾಡಿ ಸಂದೇಶ ಭಾಷಣ ಮಾಡಿದರು.
ಎಸ್‌ವೈಎಸ್ ನಾಯಕ ಹುಸೈನ್ ಪಡುಕೆರೆ, ಎಸ್‌ಎಸ್‌ಎಫ್ ರಾಜ್ಯ ನಾಯಕ ಅಶ್ರಫ್ ಮುಸ್ಲಿಯಾರ್ ಹಂಗಳೂರು, ಕೋಡಿ ಸೆಕ್ಟರ್ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ, ಡಿವಿಷನ್ ಕೋಶಾಧಿಕಾರಿ ಅಮೀರ್ ಖಾನ್ ಅಹ್ಸನಿ ಹಳವಲ್ಲಿ ಮೊದ ಲಾದವರು ಉಪಸ್ಥಿತರಿದ್ದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ನಿಝಾಂ ಪಡುಕೆರೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ತ್ವಾಹಿರ್ ಮೂಡುಗೋಪಾಡಿ ವಂದಿಸಿದರು.
Next Story





