ಗಂಟೆಗಳ ಕಾಲ ಟ್ವಿಟರ್ನಲ್ಲಿ ತಾಂತ್ರಿಕ ಸಮಸ್ಯೆ
ಕ್ಯಾಲಿಫೋರ್ನಿಯ, ಅ. 2: ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ ಬುಧವಾರ ಗಂಭೀರ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರೀ ಸಂಖ್ಯೆಯ ಬಳಕೆದಾರರಿಗೆ ಹಲವು ಗಂಟೆಗಳ ಕಾಲ ತಮ್ಮ ಖಾತೆಯನ್ನು ತೆರೆಯಲು ಸಾಧ್ಯವಾಗಿಲ್ಲ.
ತಾಂತ್ರಿಕ ದೋಷವನ್ನು ಒಪ್ಪಿಕೊಂಡ ಟ್ವಿಟರ್ ಇಂಡಿಯಾ, ‘‘ಟ್ವಿಟರ್ ಮತ್ತು ಟ್ವೀಟ್ಡೆಕ್ಗಳಲ್ಲಿ ನಾವು ತಾಂತ್ರಿಕ ದೋಷಗಳನ್ನು ಎದುರಿಸುತ್ತಿದ್ದೇವೆ. ಟ್ವೀಟ್ ಮಾಡುವಲ್ಲಿ, ನೋಟಿಫಿಕೇಶನ್ ಪಡೆಯುವಲ್ಲಿ ಹಾಗೂ ಡಿಎಂಗಳನ್ನು ನೋಡುವಲ್ಲಿ ನಿಮಗೆ ಸಮಸ್ಯೆ ಕಾಣಿಸಿರಬಹುದು. ನಾವು ದೋಷವನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಹಾಗೂ ಶೀಘ್ರವೇ ಎಲ್ಲ ಸರಿಯಾಗುತ್ತದೆ’’ ಎಂದು ಹೇಳಿದೆ.
ತಾಂತ್ರಿಕ ತೊಂದರೆಯಿಂದಾಗಿ ಜಗತ್ತಿನಾದ್ಯಂತದ ಲಕ್ಷಾಂತರ ಟ್ವಿಟರ್ ಬಳಕೆದಾರರು ಸಮಸ್ಯೆ ಎದುರಿಸಿದ್ದಾರೆ.
Next Story