ವಿಟ್ಲ: ಪೆಟ್ರೋಲ್ ಪಂಪ್ ಕಚೇರಿಗೆ ನುಗ್ಗಿದ ಕಳವು
ವಿಟ್ಲ, ಅ. 2: ಪೆಟ್ರೋಲ್ ಪಂಪ್‍ನ ಕಚೇರಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ನಗದು ಕಳವುಗೈದ ಘಟನೆ ರಾಷ್ಟ್ರೀಯ ಹೆದ್ದಾರಿಯ ವಿಟ್ಲ ಸಮೀಪದ ಕುದ್ದುಪದವಿನಲ್ಲಿ ಬೆಳಗಿನ ಜಾವ ನಡೆದಿದೆ.
ದುಬೈಯ ಶಟಫ್ ಗ್ರೂಫ್ ಆಫ್ ಕಂಪೆನಿಯ ಪೈನಾನ್ಸ್ ಡೈರೆಕ್ಟರ್ ಪ್ರಥಮ್ ಪೆಟ್ರೋಲ್ ಪಂಪ್ ಮಾಲಕ ದೇವಸ್ಯ ರಾಜಶೇಖರ ಚೌಟ ಮಾಲಕತ್ವದ ಪೆಟ್ರೋಲ್ ಪಂಪ್‍ನ ಕಚೇರಿ ಶಟರ್ ಬೀಗ ಮುರಿದ ಕಳ್ಳರು, ಸೇಫ್ ಲಾಕರನ್ನೇ ಹೊತ್ತೊಯ್ದಿದ್ದಾರೆ. ಇದರಲ್ಲಿ ಸುಮಾರು 4.30ಲಕ್ಷ ರೂ. ನಗತ್ತೆಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದರು. ಸಿಸಿ ಕ್ಯಾಮರಾದಲ್ಲಿ ಇಬ್ಬರು ವ್ಯಕ್ತಿಗಳು ಮಾತ್ರ ಘಟನೆಯನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ. ವಿಟ್ಲ ಪೊಲೀಸ್ ಠಾಣೆಯ ಎಸ್ಸೈ ಯಲ್ಲಪ್ಪ, ಪ್ರೊಬೆಷನರಿ ಎಸ್ಸೈ ರಾಜೇಶ್ ಮತ್ತು ಸಿಬ್ಬಂದಿ ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಳೆದ ವಾರ ಹೆದ್ದಾರಿ ಬದಿಯ 5 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿತ್ತು, ಇದೀಗ ವಿಟ್ಲ ಪೊಲೀಸ್ ಠಾಣಾ ಪ್ಯಾಪ್ತಿಯಲ್ಲಿ ಕಳ್ಳರು ಮತ್ತೆ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.





