ಶಕ್ತಿ ಕಾಲೇಜಿನಲ್ಲಿ ಗಾಂಧೀಜಯಂತಿ; ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮಂಗಳೂರು, ಅ.1: ಶಕ್ತಿ ನಗರದ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಹಾಗೂ ಶಕ್ತಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಬುಧವಾರ ಗಾಂಧೀಜಿಯ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಾಗೂ ಒಂದು ತಿಂಗಳ ನಿರಂತರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾಲೇಜಿನ ಮುಂಭಾಗದಲ್ಲಿ ಸ್ವಚ್ಛತಾ ಅಭಿಯಾನದ ಪ್ರತಿಜ್ಞಾವಿಧಿಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಬೋಧಿಸಿದರು. ಈ ಸಂದರ್ಭ ಅ.2ರಿಂದ ನವೆಂಬರ್ 2ರ ತನಕ ಒಂದು ತಿಂಗಳ ಕಾಲ ನಿರಂತರ ‘ಸ್ವಚ್ಛ ಶಕ್ತಿನಗರ, ಪ್ಲಾಸ್ಟಿಕ್ ಮುಕ್ತ ಶಕ್ತಿನಗರ’ ಎಂಬ ಪೋಷಣೆಯೊಂದಿಗೆ ಶಂಕರ ಅಭಿಯಾನದ ದ.ಕ. ಜಿಲ್ಲಾ ಸಂಚಾಲಕ ಶ್ರೀಧರ ಶಾಸ್ತ್ರಿ ಚಾಲನೆ ನೀಡಿದರು
ಸಂಚಾಲಕ ಶ್ರೀಧರ ಶಾಸ್ತ್ರಿ ಮಾತನಾಡಿ, ಸತ್ಯ, ನ್ಯಾಯ, ವಚನಬದ್ಧತೆ, ಆತ್ಮಶುದ್ಧಿ, ಅಹಿಂಸೆಯ ಹೋರಾಟವೇ ಸತ್ಯಾಗ್ರಹ. ಇಂತಹ ತತ್ವವನ್ನು ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಅಳವಡಿಸಿ, ಪಾಲಿಸಿದ ಫಲವಾಗಿ ಇಡೀ ಜಗತ್ತೇ ಅವರೊಂದಿಗೆ ಹೋರಾಟಕ್ಕೆ ನಿಂತಿತು. ಅದರ ಫಲವಾಗಿ ನಾವು ಸ್ವತಂತ್ರರಾದೆವು ಎಂದರು.
ಈ ಸಂದರ್ಭ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಸ್ವಚ್ಛತಾ ಕಾರ್ಯ ನಡೆಸಿದರು.
ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಕ್ತಿ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಕ್, ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಸಗುಣ ಸಿ. ನಾಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು.






.jpg)
.jpg)
.jpg)
.jpg)
.jpg)

