ಪ್ರಿಯಾಂಕಾ ಗಾಂಧಿಯಿಂದ ಮೌನ ಪಾದ ಯಾತ್ರೆ
ಲಕ್ನೋ, ಅ. 2: ಮಹಾತ್ಮಾ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಉತ್ತರಪ್ರದೇಶದ ಲಕ್ನೋದಿಂದ ಮೌನ ಪಾದ ಯಾತ್ರೆ ನಡೆಸಿದರು.
ರಾಜ್ಯಾದ್ಯಂತದ ಸಾವಿರಾರು ಕಾರ್ಯಕರ್ತರೊಂದಿಗೆ ಪಾದ ಯಾತ್ರೆ ಆರಂಭಿಸಿದ ಸಂದರ್ಭ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಬಿಜೆಪಿ ನಾಯಕ ಚಿನ್ಮಯಾನಂದನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾದ ಕಾನೂನು ವಿದ್ಯಾರ್ಥಿನಿಗೆ ಪಕ್ಷ ಬೆಂಬಲ ಮುಂದುವರಿಸಲಿದೆ ಎಂದರು.
ಲಕ್ನೋದ ಶಹೀದ್ ಸ್ಮಾರಕದಿಂದ ಪಾದಯಾತ್ರೆ ಆರಂಭಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ ಸುಮಾರು 3 ಕಿ.ಮೀ. ಕ್ರಮಿಸಿ ಜಿಪಿಒ ಪಾರ್ಕ್‌ಗೆ ತಲುಪಿ ಅಲ್ಲಿರುವ ಗಾಂಧೀಜಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಪಾದಯಾತ್ರೆ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರು ಗಾಂಧೀಜಿ ಅವರ ನೆಚ್ಚಿನ ಭಜನೆಯಾದ ‘ರಘುಪತಿ ರಾಘವ ರಾಜಾ ರಾಮ್’ ಹಾಗೂ ಇತರ ಭಜನೆಗಳನ್ನು ಹಾಡಿದರು.
Next Story