ಅ. 6ರಂದು 'ಮಜಾ ಟಾಕಿಸ್' ಗ್ರಾಂಡ್ ಫಿನಾಲೆ
![ಅ. 6ರಂದು ಮಜಾ ಟಾಕಿಸ್ ಗ್ರಾಂಡ್ ಫಿನಾಲೆ ಅ. 6ರಂದು ಮಜಾ ಟಾಕಿಸ್ ಗ್ರಾಂಡ್ ಫಿನಾಲೆ](/images/placeholder.jpg)
ಬೆಂಗಳೂರು: ಐದು ಮನೆ ಮನೆಯ ಕಥೆಗಳು, ನಾಲ್ಕು ಮನ ತಣಿಸೋ ರಿಯಾಲಿಟಿ ಶೋಗಳು. ಇಂತಹ 'ಕಲರ್ ಫುಲ್' ಮನರಂಜನೆ ಕೊಡ್ತಿರೋ 'ಸೂಪರ್' ಚಾನೆಲ್ 'ಕಲರ್ಸ್ ಸೂಪರ್'. ಅದರಲ್ಲಿ ವಾರ ಪೂರ್ತಿ ದುಡಿದು ಸುಸ್ತಾದವರನ್ನು ವಾರದ ಕೊನೆಯಲ್ಲಿ ಟಿವಿ ಮುಂದೆ ಕೂರಿಸಿ ಮನ ತುಂಬಾ ಮಜಾ ಉಣಬಡಿಸುವ ಕಾರ್ಯಕ್ರಮ ʼಮಜಾ ಟಾಕಿಸ್ʼ.
ನಗು ಒಂಥರಾ ಸಾವು ಅನ್ನೋ ವೈರಸ್ ಗೆ ಆ್ಯಂಟಿಬಯೋಟಿಕ್ ಇದ್ದಹಾಗೆ, ನಾವು ಎಷ್ಟು ನಗ್ತಿವೋ ಅಷ್ಟು ಜಾಸ್ತಿ ಬದುಕುತ್ತೇವೆ. ಈ ಆ್ಯಂಟಿಬಯೋಟಿಕ್ ಯಾವ ಮೆಡಿಕಲ್ ಸ್ಟೋರ್ ನಲ್ಲು ಸಿಗುವಂತದಲ್ಲಾ ಅದು ಸಿಗೋದು ಕೇವಲ ನೀವು ಪ್ರೀತಿಸಿ, ಅಪ್ಪಿ ಹಿಗ್ಗಿಸಿದ ಈ ಮಜಾ ಟಾಕಿಸ್ ವೇದಿಕೆಯಲ್ಲಿ. ಈ ನಗು ಆ್ಯಂಟಿಬಯೋಟಿಕ್ ಅನ್ನು ಬೇದ ಭಾವ ಮಾಡದೆ ಹಂಚುವವರು ಮಾತ್ರ ಮಾತಿನ ಮಲ್ಲ, ಮಜಾ ಮನೆಯ ಅದಿಪತಿ ʼಸೃಜನ್ಲೋಕೆಶ್ʼ.
ಮಾತು ಮನೆ ಕೆಡುಸ್ತು ಅಂತಾರೆ ಆದ್ರೆ ಇವರು ಮಾತಿನಲ್ಲೆ ಸಾಮ್ರಾಜ್ಯ ಕಟ್ಟಿದವರು, ಆ ಮಾತಿನಿಂದಲೆ ಹಾಲುಗಲ್ಲದ ಮಕ್ಕಳಿಂದ ಹಿಡಿದು ಹಲ್ಲು ಉದುರಿದ ವೃದ್ಧಾಪಿ ಜನದವರೆಗೂ ನಗೆಗಡಲಲ್ಲಿ ತೇಲಿಸಿದವರು. ಇವರದೇ ಆದ ಒಂದು ಕೊಡುಗೆ ಮಜಾ ಟಾಕಿಸ್, ನಿಮ್ಮನೆಲ್ಲಾ ನಕ್ಕು ನಗಿಸಿ ಮನರಂಜನೆ ಕೊಟ್ಟ ಈ ಮಜಾ ಟಾಕಿಸ್ ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದು ನಿಂತಿದೆ.
ಅ. 6 ರಂದು ರಾತ್ರಿ 8ಕ್ಕೆ ಮಜಾ ಟಾಕಿಸ್ ಸೂಪರ್ ಸಿಸನ್ನಿನ ಗ್ರಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯುತ್ತಿದ್ದು, ತಾರಾ, ಹರಿಪ್ರೀಯ, ಸಿಹಿ ಕಹಿ ಚಂದ್ರು, ರಾಧಿಕಾ ಹಾಗೂ ಮಾನ್ವಿತಾ ಹರೀಶ್ ಅವರಿಂದ ತಾರಾ ಮೆರಗು ಹೆಚ್ಚಿದೆ.