ಪರ್ಕಳದಲ್ಲಿ ವಿಜಯದಶಮಿ ಸಂಗೀತೋತ್ಸವ
ಉಡುಪಿ, ಅ.3: ಪರ್ಕಳದ ಸರಿಗಮ ಭಾರತಿ ವಿದ್ಯಾಲಯದ ಆಶ್ರಯದಲ್ಲಿ ಅ.8ರಂದು ವಿಜಯದಶಮಿ ಸಂಗೀತೋತ್ಸವ ನಡೆಯಲಿದೆ. ಬೆಳಗ್ಗೆ 7:45ಕ್ಕೆ ಸರಿಗಮ ಭಾರತಿಯ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆ, 8:00ರಿಂದ ಗಾಥಾ, ಶ್ರೇಯಾ, ಚಿನ್ಮಯ ಕೃಷ್ಣ, ವರ್ಧನ್ ಶಿವತ್ತಾಯ, ಚೈತನ್ಯ ಜಿ.ಎಂ ಇವರಿಂದ ಹಾಡುಗಾರಿಕೆ ನಡೆಯಲಿದೆ.
9:30ಕ್ಕೆ ಸಂಗೀತೋತ್ಸವವನ್ನು ಕ್ಯಾ.ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದಾರೆ. ನಾಡೋಜ ಕೆ.ಪಿ.ರಾವ್, ಎಂ.ಮಂಜುನಾಥ್ ಉಪಾಧ್ಯ, ಮುರಳಿ ಕಡೆಕಾರ್, ಪ್ರೊ.ಬಾಲಕೃಷ್ಣ ಮ್ದೋಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಅನಂತರ 10:20ಕ್ಕೆ ಕಾರ್ಕಳದ ಆತ್ರೇಯಿ ಕೃಷ್ಣಾ ಅವರ ಹಾಡುಗಾರಿಕೆ, 11:30ಕ್ಕೆ ಬೆಂಗಳೂರಿನ ಗುರುದತ್ ಎ. ಕೃಷ್ಣಮೂರ್ತಿ ಅವರಿಂದ ಹಿಂದೂಸ್ಥಾನಿ ಗಾಯನ, ಅಪರಾಹ್ನ 1:00ರಿಂದ ಕಾರ್ಕಳದ ಮಹತಿ ಅವರಿಂದ ವಯಲಿನ್ ಸೋಲೋ ವಾದನ, 1:40ಕ್ಕೆ ಅದಿತಿ ಹೆಬ್ಬಾರ್ ಹಾಗೂ ಅರುಂಧತಿ ಹೆಬ್ಬಾರ್ ಇವರಿಂದ ದ್ವಂದ್ವ ವಯಲಿನ್ ವಾದನ, 2:45ಕ್ಕೆ ಮಣಿಪಾಲದ ಡಾ.ಬಾಲಕೃಷ್ಣ ಅವರಿಂದ ಕೊಳಲು ಸೋಲೋ, 3:20ರಿಂದ ಶ್ರೀತ್ಯಾಗರಾಜರ ಪಂಚರತ್ನ ಗೋಷ್ಟಿಗಾಯನ ನಡೆಯಲಿದೆ.
ಸಂಜೆ 3:55ಕ್ಕೆ ನವಾವರಣ ಕೃತಿಗಳ ಗೋಷ್ಟಿಗಾಯನ, 4:30ರಿಂದ ಮೈಸೂರಿನ ಎನ್.ಆರ್.ಪ್ರಶಾಂತ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ನಡೆಯಲಿದೆ. ರಾತ್ರಿ 7:45ಕ್ಕೆ ಬೆಂಗಳೂರಿನ ರಂಜಿತಾ ಅವಿನಾಶ್ ರಿಂದ ಭರತನಾಟ್ಯವನ್ನು ಆಯೋಜಿಸಲಾಗಿದೆ ಎಂದು ವಿದ್ಯಾಲಯದ ಮುಖ್ಯಸ್ಥ ರಾದ ಉಮಾಶಂಕರಿ ಮತ್ತು ಡಾ.ಉದಯ ಶಂಕರ್ ತಿಳಿಸಿದ್ದಾರೆ.







