ಅ. 6: ‘ಕಣ್ಣೂರು ಪಾಲಿ ಕ್ಲಿನಿಕ್’ ಶುಭಾರಂಭ

ಮಂಗಳೂರು, ಅ. 3: ರಾ.ಹೆ.75ರ ಕಣ್ಣೂರು ಸಮೀಪದ ಮೆಟ್ರೋ ಸೂಪರ್ ಬಝಾರ್ ಬಳಿಯ ಮೆಟಲ್ಕೋ ಪ್ಲಾಝಾದಲ್ಲಿ ಅ.6ರ ಬೆಳಗ್ಗೆ 10:30ಕ್ಕೆ ‘ಕಣ್ಣೂರು ಪಾಲಿ ಕ್ಲಿನಿಕ್’ ಶುಭಾರಂಭಗೊಳ್ಳಲಿದೆ.
ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ ಪಾಲಿ ಕ್ಲಿನಿಕ್ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್, ಫರ್ಸ್ಟ್ ನ್ಯೂರೋ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ರಾಜೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
*ಕಣ್ಣೂರು ಪಾಲಿ ಕ್ಲಿನಿಕ್’ನಲ್ಲಿ ಡಯಾಗ್ನೊಸ್ಟಿಕ್ ಲ್ಯಾಬ್, ಡೇ ಕೇರ್ ಸೆಂಟರ್ ಆ್ಯಂಡ್ ಮೆಡಿಕಲ್ಸ್, ಮಕ್ಕಳ ಲಸಿಕಾ ಕೇಂದ್ರ, ಇಎನ್‌ಟಿ ಎಂಡೋಸ್ಕೋಪಿ ಕ್ಲಿನಿಕ್, ಇಜಿಸಿ ಮತ್ತು ನೆಬುಲೈಝೇಶನ್, ಡೆಂಟಲ್ ಕ್ಲಿನಿಕ್ ಹೀಗೆ ವಿವಿಧ ಸೌಲಭ್ಯವಿದೆ.
ತಜ್ಞ ವೈದ್ಯರು: ಕಿವಿ, ಮೂಗು, ಗಂಟಲು ತಜ್ಞರು, ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರು, ವೈದ್ಯಕೀಯ ತಜ್ಞರು, ಚರ್ಮರೋಗ ಮತ್ತು ಸೌಂದರ್ಯ ತಜ್ಞರು, ಎಲುಬು ಮತ್ತು ಕೀಲು ರೋಗ ತಜ್ಞರು, ದಂತ ಚಿಕಿತ್ಸಾ ತಜ್ಞರು, ನರ ರೋಗ ತಜ್ಞರು, ಮೂತ್ರ ರೋಗ ತಜ್ಞರು, ಪಿತ್ತಕೋಶ, ಜಠರ, ಮತ್ತು ಕರುಳಿನ ಶಸ್ತ್ರಚಿಕಿತ್ಸಾ ತಜ್ಞರು ಲಭ್ಯರಿರುತ್ತಾರೆ.
ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರಿಂದ ಹೊಲಿಗೆ ರಹಿತ ಸುನ್ನತಿ ಮಾಡುವ ವ್ಯವಸ್ಥೆ ಇದೆ. ಪ್ಲಾಸ್ಟರಿಂಗ್, ಡ್ರೆಸ್ಸಿಂಗ್ ಮುಂತಾದ ಲಘು ಶಸ್ತ್ರಚಿಕಿತ್ಸಾ ಕ್ರಮಗಳನ್ನು ಶಸ್ತ್ರಚಿಕಿತ್ಸಾ ತಜ್ಞರಿಂದ ಮಾಡಿಸುವ ಸೌಲಭ್ಯವಿದೆ. ಮೂಗಿನ ಎಂಡೋಸ್ಕೋಪಿ ಮತ್ತು ನೆಬುಲೈಝೇಶನ್ ಸೌಲಭ್ಯವಿದೆ.
ಲ್ಯಾಬ್: ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 7:30ರಿಂದ ಸಂಜೆ 7ರ ತನಕ ಮತ್ತು ರವಿವಾರ ಬೆಳಗ್ಗೆ 7:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲ್ಯಾಬ್ ತೆರೆದಿರುತ್ತದೆ. ಇದರಲ್ಲಿ ರಕ್ತ, ಮೂತ್ರ ಮತ್ತು ಕಫ ಪರೀಕ್ಷೆ, ಲಿವರ್ ಫಂಕ್ಷನ್ ಪರೀಕ್ಷೆ, ವೀರ್ಯ ಪರೀಕ್ಷೆ, ಲಿಪಿಡ್ ಪ್ರೊಫೈಲ್ ಮತ್ತು ಕೊಲೆಸ್ಟ್ರಾಲ್, ರಿನಲ್ (ಕಿಡ್ನಿ) ಫಂಕ್ಷನ್ ಪರೀಕ್ಷೆ, ಥೈರಾಯ್ಡೆ ಫಂಕ್ಷನ್ ಪರೀಕ್ಷೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.







